Select Your Language

Notifications

webdunia
webdunia
webdunia
webdunia

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಅಪಹರಿಸಿ ಕಾಮುಕರಿಗೆ ಮಾರಾಟ ಮಾಡಿದ ದುಷ್ಕರ್ಮಿಗಳು

ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಯನ್ನು ಅಪಹರಿಸಿ ಕಾಮುಕರಿಗೆ ಮಾರಾಟ ಮಾಡಿದ ದುಷ್ಕರ್ಮಿಗಳು
ಭೋಪಾಲ್ , ಮಂಗಳವಾರ, 27 ನವೆಂಬರ್ 2018 (07:22 IST)
ಭೋಪಾಲ್ : 30 ವರ್ಷದ ಮಹಿಳೆಯನ್ನು ಅಪಹರಿಸಿ ಮಾರಾಟ ಮಾಡಿದ್ದಲ್ಲದೇ ಆಕೆಯ ಮೇಲೆ ಸತತ 24 ದಿನಗಳ ಕಾಲ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪತಿಯಿಂದ ವಿಚ್ಛೇದನ ಪಡೆದಿದ್ದ ಸಂತ್ರಸ್ತ ಮಹಿಳೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದಾಳೆ ಎಂಬುದನ್ನು ಅರಿತ ದುಷ್ಕರ್ಮಿಗಳು ಆಕೆಗೆ ಕೆಲಸ ಕೊಡಿಸುವುದಾಗಿ ಹೇಳಿ ಪ್ರದೇಶವೊಂದಕ್ಕೆ ಬರಲು ತಿಳಿಸಿದ್ದಾರೆ. ಆಗ ಅಲ್ಲಿಗೆ ಬಂದ ಮಹಿಳೆಯನ್ನು ಅಪಹರಿಸಿ  2 ಲಕ್ಷ ರೂ.ಗೆ ರೋಹಿತಾಶ್ ಮತ್ತು ಭೋಲರಾಂ ಎಂಬವರಿಗೆ ಮಾರಾಟ ಮಾಡಿದ್ದಾರೆ.

 

ಬಳಿಕ ಆಕೆಯನ್ನು ಒಂದು ರೂಮಿನಲ್ಲಿ ಕೂಡಿ ಹಾಕಿ ಭೋಲಾರಂ ಎಂಬಾತ ದಿನಕ್ಕೆ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾನೆ. ಅಷ್ಟೇ ಅಲ್ಲದೇ ಈ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ.

 

ಇತ್ತ ಮಹಿಳೆಯ ಮನೆಯವರು ಆಕೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದ ಪೊಲೀಸರು ಮಹಿಳೆಯ ಫೋನ್ ನಂಬರ್ ಟ್ರ್ಯಾಕ್ ಮಾಡಿ ಆಕೆಯನ್ನು ಕಾಮುಕರಿಂದ ರಕ್ಷಿಸಿದ್ದಾರೆ. ಸದ್ಯಕ್ಕೆ ಪೊಲೀಸರು ಅಲ್ವಾರ್ ನಿವಾಸಿಗಳಾದ ರೋಹಿತ್ ಮತ್ತು ಭೋಲರಾಂ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಅವರಿಗಾಗಿ ಬಲೆ ಬೀಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಪತಿ ಇಲ್ಲದ ಸಮಯದಲ್ಲಿ ಪತ್ನಿಯ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ