ಅಮೇರಿಕಾ : ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಆಡಳಿತ ನೀತಿಯ ಬಗ್ಗೆ ಹಲವರಿಗೆ ಬೇಸರವಿದ್ದು, ಅದನ್ನು ಅವರು ಕೆಲವು ವಿಧಾನಗಳ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.
ಹೌದು. ಈ ಹಿಂದೆ ಟ್ರಂಪ್ ಮೂರ್ತಿಯನ್ನು ಮಾಡಿ ಇಲ್ಲಿ ಮೂತ್ರ ಮಾಡಿ ಎಂದು ಬರೆದು ತಮ್ಮ ಅಸಹನೆ ವ್ಯಕ್ತಪಡಿಸಿದ್ದರು. ಆದರೆ ಇದೀಗ ಟಾಯ್ಲೆಟ್ ಬ್ರಷ್ ನಲ್ಲಿ ಟ್ರಂಪ್ ಮುಖ ಹೋಲುವ ಆಕೃತಿಯನ್ನು ಮಾಡಿ ಮಾರಾಟ ಮಾಡುತ್ತಿದ್ದಾರೆ.
ಈ ಬ್ರಷ್ ಅನ್ನು ಮೇಕ್ ಯುವರ್ ಟಾಯ್ಲೆಟ್ ಗ್ರೇಟ್ ಅಗೇನ್. ನೋ ಪ್ರೆಸಿಡೆಂಟ್ ಹ್ಯಾಸ್ ಹ್ಯಾಡ್ ಎ ಟಾಯ್ಲೆಟ್ ಬ್ರಷ್ ಲೈಕ್ ಮೈ ಟಾಯ್ಲೆಟ್ ಬ್ರಷ್" ಮುಂತಾದ ಘೋಷವಾಕ್ಯಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ಇದು ಇಟಿಎಸ್‍ವೈ.ಕಾಮ್ ವೆಬ್ ಸೈಟ್‍ನಲ್ಲಿ ಲಭ್ಯವಿದ್ದು, ನ್ಯೂಜಿಲ್ಯಾಂಡ್‍ನಿಂದ ಈ ಬ್ರಷ್ ಪೂರೈಕೆ ಆಗುತ್ತಿದೆ. ಇದಕ್ಕೆ ಅಪಾರ ಬೇಡಿಕೆ ಇದ್ದು, ಗ್ರಾಹಕರು ಇದನ್ನು ಪಡೆಯಲು ಆರರಿಂದ ಎಂಟು ವಾರಗಳ ಕಾಲ ಕಾಯಬೇಕಾಗುತ್ತಿದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ