Publish Date: Fri, 11 Jan 2019 (11:58 IST)
Updated Date: Fri, 11 Jan 2019 (12:00 IST)
ಪಂಚಕುಲಾ : ಈಗಾಗಲೇ ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿರುವ ದೇರಾ ಸಚ್ಚಾ ಸೌಧದ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಬಾಬಾ ರಾಮ್ ರಹೀಮ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸಿರ್ಸಾ ಮೂಲದ ಛತ್ರಪತಿ ರಾಮಚಂದ್ರ ಎಂಬ ಪತ್ರಕರ್ತನ ಹತ್ಯೆ ಆರೋಪ ರಾಮ್ ರಹೀಂ ಬಾಬಾ ಮೇಲಿದ್ದು, ಇಂದು ಹರಿಯಾಣದ ಪಂಚಕುಲ ಸಿಬಿಐ ವಿಶೇಷ ನ್ಯಾಯಾಲಯವು ಈ ಪ್ರಕರಣದ ಬಗ್ಗೆ ತೀರ್ಪು ನೀಡಲಿದೆ. ಈ ಹಿನ್ನಲೆಯಲ್ಲಿ ಹರಿಯಾಣದ ಪಂಚಕುಲ ಸಿಬಿಐ ಕೋರ್ಟ್ ಸುತ್ತಮುತ್ತ ಭಾರೀ ಭದ್ರತೆ ಏರ್ಪಡಿಸಲಾಗಿದೆ.
ಛತ್ರಪತಿ ರಾಮಚಂದ್ರ ಎಂಬ ಪತ್ರಕರ್ತ ತಮ್ಮ ಆಶ್ರಮದ ಬಗ್ಗೆ ಲೇಖನ ಬರೆದಿದ್ದ ಕಾರಣಕ್ಕೆ ಸ್ವಯಂ ಘೋಷಿತ ದೇವಮಾನವ, ದೇರಾ ಸಚ್ಚಾ ಸೌಧದ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಬಾಬಾ ರಾಮ್ ರಹೀಮ್ ಆತನ ತಲೆಗೆ ಗುಂಡಿಟ್ಟು ಕೊಲೆ ಮಾಡಿದ ಆರೋಪ ಹೊತ್ತಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.