Publish Date: Mon, 15 Apr 2019 (18:04 IST)
Updated Date: Mon, 15 Apr 2019 (18:07 IST)
ಅವನ್ಯಾವನೋ ಯಶ್ ಅಂತೆ. ಅವನು ನನ್ನ ಪಕ್ಷವನ್ನ ಕಳ್ಳರ ಪಕ್ಷ ಅಂತಾನೆ. ಹಳ್ಳಿ ಕಡೆ ಬಂದು ನೋಡಲಿ ಅವನಿಗೆ ಇನ್ನೂ ಗೊತ್ತಿಲ್ಲ. ನಮ್ಮ ಕಾರ್ಯಕರ್ತರು ಬಾಯಿ ಮುಚ್ಕೊಂಡು ಇರೋದು ನನಗೆ ತೊಂದರೆ ಆಗ್ತದೆ ಅಂತ. ಹೀಗಂತ ನಟ ಯಶ್ ವಿರುದ್ಧ ಸಿಎಂ ಗರಂ ಆಗಿದ್ದಾರೆ.
ನಾನು ನಿರ್ಮಾಪಕನೇ, ನಾನು ಇಂತವರನ್ನೆ ಹಾಕೊಂಡು ಸಿನೆಮಾ ಮಾಡಿದ್ದೇನೆ. ನಿರ್ಮಾಪಕರಿದ್ರೆನೆ ಇವರೆಲ್ಲಾ.
ನೀವು ಬದುಕುತ್ತಿರೋದು ನಿಜ. ಆದರೆ ಸಿನೆಮಾದಲ್ಲಿ ಬರೋದನ್ನ ನಂಬಬೇಡಿ ಅಂತ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಎರಡು ಬಾರಿ ಚಿಕಿತ್ಸೆಗೆ ಒಳಗಾದವನು ನಾನು. ಇಸ್ರೇಲ್‌ಗೆ ಹೋದಾಗಲೇ ನನ್ನ ಜೀವ ಹೋಗಬೇಕಾಗಿತ್ತು.
ವೈದ್ಯರು ಚಿಕಿತ್ಸೆ ಕೊಡಲೇ ಬೇಕು ಅಂದ್ರು. ಆದ್ರೆ ನಾನು ಬಂದಿರೋದು ರೈತರಿಗೆ ಒಳ್ಳೆಯದು ಮಾಡಲು ಎಂದರು. ಯಾವುದಾದ್ರು ಮಾತ್ರೆ ಕೊಡಿ ಸಾಕು ಎಂದು ಅಂದೆ. ಮತ್ತೆ ತಾವು ಸಾವಿನ ಸನಿಹ ಹೋಗಿದ್ದ ಸನ್ನಿವೇಶವನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಚ್ಚಿಟ್ಟರು.