Publish Date: Sun, 14 Apr 2019 (19:10 IST)
Updated Date: Sun, 14 Apr 2019 (19:13 IST)
ನಿಖಿಲ್ ಎಲ್ಲಿದ್ಯಪ್ಪ, ನಿಖಿಲ್ ಎಲ್ಲಿದ್ಯಪ್ಪ ಎಂದು ಬಹಳ ಚರ್ಚೆ ಯಾಗ್ತಿದೆ ಈ ಬಗ್ಗೆ ಸ್ವಲ್ಪ ಮಾತನಾಡಿ ಎಂದು ಸಿಎಂ ಗೆ ಯುವಕನೊಬ್ಬ ಮಾಡಿದ ಮನವಿಗೆ ಸಿಎಂ ಉತ್ತರ ಕೊಟ್ಟಿದ್ದಾರೆ.
ನಿಖಿಲ್ ಎಲ್ಲಿದ್ಯಪ್ಪ ಎಂಬ ಪ್ರಶ್ನೆಗೆ ಕೊನೆಗೂ ಉತ್ತರಿಸಿದ್ದಾರೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ.
ನಿಖಿಲ್ ಎಲ್ಲಿದ್ಯಪ್ಪ ಅಂದ್ರೆ ನಮ್ಮ ಹೃದಯಲ್ಲಿದ್ದಾನೆ ಅಂತಾ ಹೇಳಬೇಕು ಅಂತ ಸಿಎಂ ಹೇಳಿದ್ದಾರೆ. ಕೆ ಆರ್ ನಗರದ ನಾರಾಯಣಪುರ ಗ್ರಾಮದಲ್ಲಿರುವ ಯುವಕರಿಗೆ ಈ ರೀತಿ ಸಿಎಂ ಹೇಳಿದ್ದಾರೆ.
ಯುವಕರು ಈ ಟ್ರೋಲ್ ಗಳ ಬಗ್ಗೆ ತಲೆ ಕಡೆಸಿಕೊಳ್ಳಬೇಡಿ. ಆ ಟ್ರೋಲ್ ಮಾಡುವರು ಯಾರು..? ನಿಖಿಲ್ ಎಲ್ಲಿದ್ಯಪ್ಪ ಎಂದರೆ ನಮ್ಮ ಹೃದಯದಲ್ಲಿದ್ದಾನೆ ಎನ್ನಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಒಂದು ತಂಡ ಕೆಟ್ಟ ರೀತಿಯಲ್ಲಿ ಈ ರೀತಿ ಬಿಂಬಿಸ್ತಿದ್ದಾರೆ. ಈ ರೀತಿಯ ಕೆಟ್ಟ ಅಭಿರುಚಿ ಇಟ್ಟು ಕೊಂಡಿರೋದು ಸಮಾಜ ಹಾಳು ಮಾಡುವಂತದ್ದು. ಇಂತಹವರ ಬಗ್ಗೆ ನಾವು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸಿಎಂ, ಟ್ರೋಲ್ ಮಾಡೋರ ವಿರುದ್ಧ ಛಾಟಿ ಬೀಸಿದ್ರು.