Publish Date: Thu, 20 Apr 2023 (20:02 IST)
Updated Date: Thu, 20 Apr 2023 (20:04 IST)
ಮಾಜಿ ಸಿಎಂ S.M. ಕೃಷ್ಣ ಸಹೋದರನ ಪುತ್ರ, ಕಾಂಗ್ರೆಸ್ ಟಿಕೆಟ್ ವಂಚಿತ ಎಸ್.ಗುರುಚರಣ್ ಇಂದು ಅಧಿಕೃತವಾಗಿ JDS ಸೇರ್ಪಡೆಯಾಗಿದ್ದಾರೆ.. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಮನೆಯಲ್ಲಿ ಗುರುಚರಣ್ ಕಾಂಗ್ರೆಸ್ ತೊರೆದು JDS ಸೇರ್ಪಡೆಗೊಂಡಿದ್ದಾರೆ.. ಮಾಜಿ ಸಿಎಂ H.D. ಕುಮಾರಸ್ವಾಮಿ ಗುರುಚರಣ್ಗೆ ಪಕ್ಷದ ಬಾವುಟ ಕೊಟ್ಟು, ಶಾಲು ಹೊದಿಸಿ, ಹಾರ ಹಾಕಿ ಸ್ವಾಗತಿಸಿದ್ದಾರೆ.. HDK , ಶಾಸಕ ಡಿ.ಸಿ.ತಮ್ಮಣ್ಣ ನೇತೃತ್ವದಲ್ಲಿ ಗುರುಚರಣ್ ಜೆಡಿಎಸ್ ಸೇರಿದ್ರು. ಗುರುಚರಣ್ ಮದ್ದೂರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ರು. ಆದ್ರೆ ಟಿಕೆಟ್ ಸಿಗದ ಕಾರಣ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.