Select Your Language

Notifications

webdunia
webdunia
webdunia
webdunia

ವಿದ್ಯಾಭ್ಯಾಸಕ್ಕಾಗಿ ಪ್ರೀತಿಗೆ ಗುಡ್‌ಬೈ ಹೇಳಿದ ಯುವತಿ: ಕೋಪಗೊಂಡ ಯುವಕ ಮಾಡಿದ್ದೇನು

Tragedy Love Story, Bellary Love Story, Love Refuses

Sampriya

ಬಳ್ಳಾರಿ , ಶನಿವಾರ, 4 ಜನವರಿ 2025 (18:06 IST)
ಬಳ್ಳಾರಿ: ವಿದ್ಯಾಭ್ಯಾಸಕ್ಕಾಗಿ ಪ್ರೀತಿಗೆ ಬ್ರೇಕ್ ಹಾಕುವ ಎಂದ ಯುವತಿ ಮೇಲೆ ಹಲ್ಲೆ ಮಾಡಿದ ಬಳಿಕ ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರಿನ ಚರ್ಚ್ ಶಾಲೆ ರಸ್ತೆಯಲ್ಲಿ ನಡೆದಿದೆ.

ಭಗ್ನ ಪ್ರೇಮಿಯೊಬ್ಬ ತಾನು ಪ್ರೀತಿಸಿದ ಯುವತಿ ಹಾಗೂ ಮತ್ತವರ ಮನೆಯವರ ಮೇಲೆ ಹಲ್ಲೆ ಮಾಡಿ, ಬಳಿಕ ತಾನೂ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಹೊಸಪೇಟೆ ತಾಲೂಕಿನ ಪಿ.ಕೆ.ಹಳ್ಳಿ ಮೂಲದ ನವೀನ್ ಕುಮಾರ್‌ ಹಲ್ಲೆ ಮಾಡಿ, ಆತ್ಮಹತ್ಯೆ ಮಾಡಿಕೊಂಡಿರುವಾತ.

ನವೀನ್ ಕುಮಾರ್ ಪ್ರೇಯಸಿ ಸೇರಿ ಕುಟುಂಬದ ಮೂವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದ.
ಯುವತಿ ಮತ್ತವರ ತಾಯಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯುವತಿಯ ಅಣ್ಣನಿಗೆ ಬಲವಾಗಿ ಮಚ್ಚಿನೇಟು ಬಿದ್ದಿದೆ. ಚಿಕಿತ್ಸೆಗಾಗಿ ಮೂವರನ್ನೂ ತೋರಣಗಲ್ಲು ಜಿಂದಾಲ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆರೋ‍ಪಿ ಪತ್ತೆಗೆ ಹುಡುಕಾಟ ನಡೆಸಿದಾಗ ಆರೋಪಿ ಯಶವಂತ ನಗರ ಬಳಿಯ ರೈಲೆ ಹಳಿ ಮೇಲೆ ನವೀನ್ ಮೃತದೇಹ ಪತ್ತೆಯಾಗಿದೆ.

ಯುವತಿ ಮತ್ತು ಆರೋಪಿ ನವೀನ್ ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸ್ತಿದ್ದರು. ಬಾಳೆಹಣ್ಣು ವ್ಯಾಪಾರ ಮಾಡ್ತಿದ್ದ ನವೀನ್ ಮತ್ತು ಯುವತಿ ನಡುವೆ ಕಾಲೇಜು ಓದುವಾಗಲೇ ಪ್ರೇಮಾಂಕುರವಾಗಿತ್ತು. ಪ್ರೀತಿಸುವಾಗಲೇ ಪರಸ್ಪರ ಹಾರ ಬದಲಾಯಿಸಿಕೊಂಡಿದ್ದರು. ಎಂಎಸ್ಸಿ ಓದುವ ಹಿನ್ನೆಲೆ ಪ್ರೀತಿ ಪ್ರೇಮಕ್ಕೆ ಬ್ರೇಕ್ ಹಾಕೋದಾಗಿ ಯುವತಿ ಹೇಳಿದ್ದಳು. ಇದರಿಂದ ಅಸಮಾಧಾನಗೊಂಡಿದ್ದ ಪಾಪಿನಾಯಕನಹಳ್ಳಿ ಮೂಲದ ನವೀನ್ ನಿನ್ನೆ ಸಂಜೆ ಸಂಡೂರಿಗೆ ಬಂದು ಪ್ರೇಯಸಿ ಮನೆಯ ಮುಂದೆ ಗಲಾಟೆ ಮಾಡಿದ್ದಾನೆ.

ಈ ವೇಳೆ ಗಲಾಟೆ ನಡೆದು ಯುವತಿ ಮತ್ತವರ ತಾಯಿ ಮೇಲೆ ಹಲ್ಲೆ ಮಾಡಿದ್ದಾನೆ. ಬಿಡಿಸಲು ಬಂದ ಪ್ರೇಯಸಿಯ ಸಹೋದರನ ಮೇಲೂ ಮಚ್ಚು ಬೀಸಿದ್ದಾನೆ. ಗಲಾಟೆ ಜೋರಾಗುತ್ತಿದ್ದಂತೆ ಅಲ್ಲಿಂದ ಓಡಿ ಹೋಗಿದ್ದ ನವೀನ್. ಬಳಿಕ ಇಂದು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾನೆ. ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಡ್ಡಾ ಜೀ ಬಳಿ ಚಾಡಿ ಹೇಳಿಲ್ಲಪ್ಪ, ಯುವಕನಾದ ನನ್ನನ್ನೇ ಮತ್ತೆ ರಾಜ್ಯಾಧ್ಯಕ್ಷ ಮಾಡ್ತಾರೆ: ಬಿವೈ ವಿಜಯೇಂದ್ರ