ಮೈಸೂರು: ದೇವನೂರು ಬಡಾವಣೆಯ ಕೆಸರೆ ಗ್ರಾಮಕ್ಕೆ ಸಿದ್ದರಾಮಯ್ಯ ಹೆಸರನ್ನು ಇಡಲಿ. ಅಲ್ಲಿಯೇ ಅಲ್ಲವೇ ಅವರು ಬಹುದೊಡ್ಡ ಸಾಧನೆ ಮಾಡಿರುವುದು. ಅದಲ್ಲದೆ ಈ ರಾಜ್ಯಕ್ಕೂ ಅವರ ಹೆಸರನ್ನೇ ಇಟ್ಟುಬಿಡಲಿ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಗಿ ಮಾತನಾಡಿದರು.
ಕೆಆರ್ಎಸ್ ರಸ್ತೆಗೆ ಸಿದ್ದರಾಮಯ್ಯ ಆರೋಗ್ಯ ಮಾರ್ ನಾಮಕರಣ ಪ್ರಸ್ತಾವದ ಕುರಿತು ಇಲ್ಲಿ ಶನಿವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ವಿಚಾರ ವಿವಾದದ ಸ್ವರೂಪ ಪಡೆದುಯುತ್ತಿದ್ದರು ಸಿಎಂ ಮಾತ್ರ ಜಾಣ ಮೌನದಲ್ಲಿದ್ದಾರೆ.
ಬೆಂಬಲಿಗರನ್ನು ಛೂ ಬಿಟ್ಟು, ಚಿತಾವಣೆ ಮಾಡಿ ರಸ್ತೆಗೆ ಹೆಸರಿಟ್ಟಿಸಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೆಸರಿನ ರಾಜಕಾರಣವನ್ನು ಕೈ ಬಿಡಬೇಕೆಂದರು.
ನಾನು ಬಿಜೆಪಿ ಜತೆ ಈ ಹಿಂದೆ ಸರ್ಕಾರ ಮಾಡಿದ್ದೆ. ಸಿಎಂ ಆಗಿ ಮೈಸೂರಿಗೆ ಎಷ್ಟು ಕೊಡುಗೆ ನೀಡಿದ್ದೇನೆ. ಡಿಸಿಎಂ, ವಿಧಾನಸಭೆ ವಿರೋಧಪಕ್ಷದ ನಾಯಕ ಹಾಗೂ ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೈಸೂರಿಗೆ ಏನೇನು ಕೊಡುಗೆ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಚರ್ಚೆಯಾಗಲಿ ಎಂದು ಸವಾಲೆಸೆದರು.