Publish Date: Wed, 22 May 2019 (13:51 IST)
Updated Date: Wed, 22 May 2019 (13:53 IST)
ಬೈಕ್ ಮೇಲೆ ದಂಧೆಕೋರರು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಅಂದರ್ ಆಗಿದ್ದಾರೆ.
ಬೈಕ್ ಮೇಲೆ ಗಾಂಜಾ ಸಾಗಿಸುತ್ತಿದ್ದ ಮೂವರ ಬಂಧನ ಮಾಡಲಾಗಿದೆ.
ಹುಕ್ಕೇರಿ ಪೊಲೀಸರಿಂದ ಮಾಲ್ ಸಮೇತ ದಂಧೆಕೋರರು ಅಂದರ್ ಆಗಿದ್ದಾರೆ. ಬಂಧಿತರಿಂದ 16,500 ರೂ. ಮೌಲ್ಯದ 1 ಕೆಜಿ 700 ಗ್ರಾಮ್ ಗಾಂಜಾ ವಶಕ್ಕೆ ಪಡೆದಿದ್ದಾರೆ ಪೊಲೀಸರು.
ರಿಯಾಜ್ ಅವಟೆ, ಮಹಾನಿಂಗ ಕಿಮ್ಮೂರಿ, ಶೀತಲ್ ಸಂಜೀವಗೊಳ ಬಂಧಿತರು. ವಿಜಯಪುರದಿಂದ ಬೆಳಗಾವಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಆರೋಪಿಗಳು ಇವರಾಗಿದ್ದರು.
ಹುಕ್ಕೇರಿ ಪಟ್ಟಣದ ಬೈ ಪಾಸ್ ಬಳಿ ಮಾಲ್ ಸಮೇತ ಸಿಕ್ಕಿಬಿದ್ದಿದ್ದಾರೆ ದಂಧೆ ಕೋರರು. ಹುಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.