Publish Date: Sat, 18 May 2019 (16:20 IST)
Updated Date: Sat, 18 May 2019 (16:23 IST)
ಎಟಿಎಂಗಳಿಗೆ ಕನ್ನ ಹಾಕಿ ಹಣ ದೋಚುತ್ತಿದ್ದ ಕಿಲಾಡಿ ಜೋಡಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಎರಡು ತಿಂಗಳ ಹಿಂದೆ ಉತ್ತರ ಕನ್ನಡದ ಶಿರಸಿಯ ದಾಸನಕೊಪ್ಪದಲ್ಲಿ ಇಂಡಿಯನ್ ಒವರ್‌ಸೀಸ್ ಬ್ಯಾಂಕ್ ನ ಎಟಿಎಂನಲ್ಲಿ ಕಳ್ಳತನಕ್ಕೆ ಯತ್ನಿಸಿದ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬನವಾಸಿ ಪೊಲೀಸರು ಬಂಧಿಸಿದ್ದಾರೆ.
ಬದನಗೋಡಿನ ಸಂತೋಷ ಬೋವಿವಡ್ಡರ್ (21), ಇಟಗುಳಿ ಕಲಕೊಪ್ಪದ ಮುನ್ನಾಸಾಬ್ ದಾವುದ್‌ಸಾಬ್ (32) ಬಂಧಿತ ಆರೋಪಿಗಳಾಗಿದ್ದಾರೆ.
ಸಿಪಿಐ ಬಿ. ಗಿರೀಶ ನೇತೃತ್ವದಲ್ಲಿ ತನಿಖಾಧಿಕಾರಿ ಚಂದ್ರಶೇಖರ ಹರಿಹರ ತನಿಖೆ ಕೈಗೊಂಡಿದ್ದರು. ಆರೋಪಿಗಳ ಪತ್ತೆಗೆ ಶ್ರಮಿಸಿದ ಬನವಾಸಿ ಠಾಣೆಯ ಸಿಬ್ಬಂದಿಯನ್ನು ಎಸ್ಪಿ ವಿನಾಯಕ ಪಾಟೀಲ ಪ್ರಶಂಸಿಸಿದ್ದಾರೆ.