Select Your Language

Notifications

webdunia
webdunia
webdunia
webdunia

ಕಾರ್ ಗಾಜು ಒಡೆದು ಲಕ್ಷ ಲಕ್ಷ ನಗದು ದರೋಡೆ

ಸಿಸಿಟಿವಿ
ಕಲಬುರಗಿ , ಗುರುವಾರ, 16 ಮೇ 2019 (16:53 IST)
ಸ್ವಿಪ್ಟ್ ಕಾರಿನ ಗಾಜು ಒಡೆದು ಲಕ್ಷ ಲಕ್ಷ ನಗದು ದೋಚಿರುವ ಘಟನೆ ನಡೆದಿದೆ.

ಕಲಬುರ್ಗಿಯ ಸಿಟಿ ಬಸ್ ನಿಲ್ದಾಣ ಬಳಿ ನಡೆದ ಘಟನೆ ಇದಾಗಿದ್ದು, 3.85 ಲಕ್ಷ ರೂಪಾಯಿ ಕಳ್ಳರು ದೋಚಿದ್ದಾರೆ. 

ಶಹಬಾದ್ ತಾಲೂಕು ಗೋಳಾ (ಕೆ) ಗ್ರಾಮದ ಮಾಣಿಕ ಪಾಟೀಲ್ ಎಂಬುವರಿಗೆ ಸೇರಿದ ಹಣವನ್ನು ದೋಚಲಾಗಿದೆ.

ಕಾಂಟ್ರ್ಯಾಕ್ಟರ್ ಆಗಿರುವ ಮಾಣಿಕ ಪಾಟೀಲ್, ಬಳಕೆಗಾಗಿ ಕರ್ನಾಟಕ ಬ್ಯಾಂಕ್ ದಿಂದ ಹಣ ಡ್ರಾ ಮಾಡಿದ್ದರು.
ಬ್ಯಾಂಕಿನಿಂದಲೇ ಸಂಚು ರೂಪಿಸಿದ ಇಬ್ಬರು ಖದೀಮ ಕಳ್ಳರು ಕೈ ಚಳಕ ತೋರಿದ್ದಾರೆ.

ಕಾರ್ ನಲ್ಲಿ ಹಣವಿಟ್ಟು 15 ನಿಮಿಷ ಖಾಸಗಿ ಕೆಲಸ ಮುಗಿಸಿ ಬರುವಷ್ಟರಲ್ಲಿ ಕೈಚಳಕ ತೋರಿರುವ ಖದೀಮರು ಪರಾರಿಯಾಗಿದ್ದಾರೆ. ಕಳ್ಳರ ದುಷ್ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬ್ಯಾಂಕ್ ನಲ್ಲಿ ಮಾಣಿಕ್ ಪಾಟೀಲ್ ಹಣ ಡ್ರಾ ಮಾಡುವುದನ್ನು ಗಮನಿಸಿದ್ದಾರೆ ಕಳ್ಳರು. ಕಾರ್ ಪಾರ್ಕ್ ಮಾಡಿದಾಗ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಕಳ್ಳರಿಂದ ದೃಷ್ಕೃತ್ಯ ನಡೆದಿದೆ. ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರಿಗಾಗಿ ಜಾಲ ಬೀಸಿದ್ದಾರೆ ಪೊಲೀಸರು.


Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ಸಂಕೇಶ್ವರ್ ವಿರುದ್ಧ ಸೈಬರ್ ಕ್ರೈಂಗೆ ದೂರು