Select Your Language

Notifications

webdunia
webdunia
webdunia
webdunia

ಇಂಡಿಕಾ ಕಾರಿನಲ್ಲಿ ಬಂದು ಏನೇನು ಕದಿಯುತ್ತಿದ್ರು ಗೊತ್ತಾ?

ಇಂಡಿಕಾ ಕಾರಿನಲ್ಲಿ ಬಂದು ಏನೇನು ಕದಿಯುತ್ತಿದ್ರು ಗೊತ್ತಾ?
ಆನೇಕಲ್ , ಮಂಗಳವಾರ, 14 ಮೇ 2019 (16:25 IST)
ಹೈಟೆಕ್ ಥರ ಡ್ರೆಸ್ ಮಾಡಿಕೊಂಡು ಇಂಡಿಕಾ ಕಾರಿನಲ್ಲಿ ಬರುತ್ತಿದ್ದವರು ಅವನ್ನು ಕಳ್ಳತನ ಮಾಡುತ್ತಿದ್ದವರಿಗೆ ಹಿಗ್ಗಾ ಮುಗ್ಗಾ ಥಳಿಸಲಾಗಿದೆ.

ಕುರಿಗಳನ್ನು ಕದಿಯಲು ಬಂದಿದ್ದ ಖದೀಮರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಗ್ರಾಮಸ್ಥರು. ತಡರಾತ್ರಿ ಕುರಿಗಳನ್ನು ಕದಿಯಲು ಬಂದಿದ್ದಾಗ ಗ್ರಾಮದ ಜನಕ್ಕೆ ಸಿಕ್ಕಿ ಬಿದಿದ್ದಾರೆ ಆಸಾಮಿಗಳು.
ಆನೇಕಲ್ ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಘಟನೆ ನಡೆದಿದೆ.

ಟಾಟಾ ಇಂಡಿಕಾ ಕಾರಿನಲ್ಲಿ ಬಂದಿದ್ದ ನಾಲ್ವರು ಕುರಿ ಕಳ್ಳರು, ಕಳ್ಳತನ ಮಾಡುವಾಗ ಇಂಡ್ಲವಾಡಿ ಗ್ರಾಮಸ್ಥರ ಕೈ ಸಿಕ್ಕಿ ಬಿದ್ದಿದ್ದಾರೆ. ಅವರಿಗೆ ಜನರು ಧರ್ಮದೇಟು ನೀಡಿದ್ದಾರೆ. ಓರ್ವ ಪರಾರಿಯಾಗಿದ್ದಾನೆ. ಕಳ್ಳರನ್ನು ಆನೇಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ ಗ್ರಾಮಸ್ಥರು.

ಇನ್ನೋರ್ವ ಖದೀಮನಿಗಾಗಿ ಬಲೆ ಬೀಸಿದ್ದಾರೆ ಪೊಲೀಸರು.




Share this Story:

Follow Webdunia kannada

ಮುಂದಿನ ಸುದ್ದಿ

ಆ ಆಸೆಗೆ 2 ವರ್ಷ ಗೃಹಬಂಧನದಲ್ಲಿ ಇಟ್ಟರು