Publish Date: Wed, 08 May 2019 (08:15 IST)
Updated Date: Wed, 08 May 2019 (08:17 IST)
ಚೆನ್ನೈ: ಐಪಿಎಲ್ ಈಗ ಯುವ ಜನರಲ್ಲಿ ಕ್ರೇಜ್ ಮೂಡಿಸಿರುವುದು ಹೊಸತೇನಲ್ಲ. ಆದರೆ ಈ ಐಪಿಎಲ್ ಕ್ರೇಜ್ ಪರೀಕ್ಷೆ ಪ್ರಶ್ನೆ ಪತ್ರಿಕೆವರೆಗೂ ಬಂದು ನಿಂತಿದೆ.
ಇದು ತಮಾಷೆಯಲ್ಲ. ಐಐಟಿ ವಿದ್ಯಾರ್ಥಿಗಳ ಸೆಮಿಸ್ಟರ್ ಪರೀಕ್ಷೆ ಪತ್ರಿಕೆಯಲ್ಲಿ ಹವಾಗುಣ ಮತ್ತು ಹವಾಮಾನ ಮುನ್ಸೂಚನೆ ಬಗ್ಗೆ ವಿವರಣೆ ನೀಡಿ ತೇವಾಂಶ ಮತ್ತು ಉಷ್ಣಾಂಶದ ಹವಾಗುಣದಲ್ಲಿ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಳ್ಳಬೇಕೋ, ಫೀಲ್ಡಿಂಗ್ ಆಯ್ದುಕೊಳ್ಳಬೇಕೋ ಎಂದು ಪ್ರಶ್ನೆ ಕೇಳಲಾಗಿದೆ.
ಪ್ರಶ್ನೆ ಪತ್ರಿಕೆಯಲ್ಲಿ ಪ್ರಶ್ನೆ ನೋಡಿ ವಿದ್ಯಾರ್ಥಿಗಳಿಗೇ ದಂಗುಬಡಿದಿದ್ದಾರೆ. ಕ್ರಿಕೆಟ್ ದಿಗ್ಗಜರ ಬಗ್ಗೆ ಪ್ರಶ್ನೆ ಕೇಳಿದ ಉದಾಹರಣೆಗಳು ಇವೆ. ಆದರೆ ಹವಾಗುಣದ ಬಗ್ಗೆ ವಿವರಣೆ ನೀಡಲು ಈ ರೀತಿ ಕ್ರಿಕೆಟ್ ಬಗ್ಗೆ ಪ್ರಶ್ನೆ ಕೇಳಿದ್ದು ಇದೇ ಮೊದಲು ಇರಬೇಕು!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ