Select Your Language

Notifications

webdunia
webdunia
webdunia
webdunia

ತನ್ನ ಸ್ವಾರ್ಥಕ್ಕಾಗಿ ಹಲವು ಕ್ರಿಕೆಟಿಗರ ಜೀವನ ಹಾಳು ಮಾಡಿದ್ದರಂತೆ ಶಾಹಿದ್ ಅಫ್ರಿದಿ!

ತನ್ನ ಸ್ವಾರ್ಥಕ್ಕಾಗಿ ಹಲವು ಕ್ರಿಕೆಟಿಗರ ಜೀವನ ಹಾಳು ಮಾಡಿದ್ದರಂತೆ ಶಾಹಿದ್ ಅಫ್ರಿದಿ!
ಇಸ್ಲಾಮಾಬಾದ್ , ಬುಧವಾರ, 8 ಮೇ 2019 (07:50 IST)
ಇಸ್ಲಾಮಾಬಾದ್: ಇತ್ತೀಚೆಗಷ್ಟೇ ಆತ್ಮಕತೆ ಬರೆದು ಹಲವು ವಿವಾದಗಳಿಗೆ ಕಾರಣವಾಗಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಬಗ್ಗೆ ಅವರ ಸಹ ಕ್ರಿಕೆಟಿಗರೊಬ್ಬರ ಸ್ಪೋಟಕ ಮಾಹಿತಿ ನೀಡಿದ್ದಾರೆ.


ಪಾಕ್ ಕ್ರಿಕೆಟಿಗ ಇಮ್ರಾನ್ ಫರ್ಹಾತ್ ಈ ಆರೋಪ ಮಾಡಿದ್ದಾರೆ. ತನ್ನ 20 ವರ್ಷಗಳ ವೃತ್ತಿ ಜೀವನದಲ್ಲಿ ಯಾವತ್ತೂ ವಯಸ್ಸಿನ ಬಗ್ಗೆ ಸುಳ್ಳೇ ಹೇಳಿಕೊಂಡು ಬಂದ ಅಫ್ರಿದಿಗೆ ಈಗ ಪಾಕಿಸ್ತಾನದ ಮಾಜಿ ದಿಗ್ಗಜ ಕ್ರಿಕೆಟಿಗರ ಬಗ್ಗೆ ಟೀಕೆ ಮಾಡಲು ನಾಚಿಕೆಯಾಗಬೇಕು ಎಂದು ಫರ್ಹಾತ್ ಹೇಳಿಕೊಂಡಿದ್ದಾರೆ.

ತನ್ನ ಸ್ವಾರ್ಥ ಸಾಧನೆಗೆ ಹಲವು ಕ್ರಿಕೆಟಿಗರ ಜೀವನ ಹಾಳು ಮಾಡಿದ ವ್ಯಕ್ತಿ ಶಾಹಿದ್ ಅಫ್ರಿದಿ. ಇಝಾಜ್ ಬಟ್ ಪಿಸಿಬಿ ಅಧ್ಯಕ್ಷರಾಗಿದ್ದಾಗ ಎಲ್ಲಾ ಕ್ರಿಕೆಟಿಗರೂ ಅಫ್ರಿದಿ ಬಗ್ಗೆ ದೂರು ನೀಡಿದ್ದರು. ಅಫ್ರಿದಿಗೆ ತನ್ನ ಉದ್ದೇಶ ಸಾಧನೆ ಮಾತ್ರ ಮುಖ್ಯವಾಗಿತ್ತು ಎಂದು ಸರಣಿ ಟ್ವೀಟ್ ಮಾಡಿರುವ ಫರ್ಹಾನ್ ದೂರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್: ಧೋನಿ ಪಡೆಗೆ ಶಾಕ್ ಕೊಟ್ಟ ಮುಂಬೈ ಇಂಡಿಯನ್ಸ್ ಫೈನಲ್ ಗೆ