ನವದೆಹಲಿ: ತಮ್ಮ ಆತ್ಮಕತೆಯಲ್ಲಿ ಗೌತಮ್ ಗಂಭೀರ್ ರನ್ನು ಜರೆದಿದ್ದ ಶಾಹಿದ್ ಅಫ್ರಿದಿಗೆ ಈಗ ಗಂಭಿರ್ ತಿರುಗೇಟು ನೀಡಿದ್ದಾರೆ.
ಗಂಭೀರ್ ಜತೆಗೆ 2007 ರ ಏಷ್ಯಾ ಕಪ್ ನಲ್ಲಿ ತಾವು ಮೈದಾನದಲ್ಲಿ ಕಾದಾಡಿದ್ದನ್ನು ಅಫ್ರಿದಿ ತಮ್ಮ ‘ಗೇಮ್ ಚೇಂಜರ್’ ಎಂಬ ಆತ್ಮಕತೆಯಲ್ಲಿ ಪ್ರಸ್ತಾಪಿಸಿದ್ದಲ್ಲದೆ, ಭಾರತೀಯ ಕ್ರಿಕೆಟಿಗನ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದರು.
ಇದೀಗ ಅಫ್ರಿದಿಗೆ ತಿರುಗೇಟು ನೀಡಿರುವ ಗಂಭೀರ್ ಮೊದಲು ಅಫ್ರಿದಿಯನ್ನು ಮಾನಸಿಕ ರೋಗ ತಜ್ಞರ ಬಳಿ ಕರೆದೊಯ್ಯಬೇಕು ಎಂದಿದ್ದಾರೆ. ಟ್ವಿಟರ್ ನಲ್ಲಿ ಶಾಹಿದ್ ಅಫ್ರಿದಿಯನ್ನು ಟ್ಯಾಗ್ ಮಾಡಿ ಕಾಮೆಂಟ್ ಮಾಡಿರುವ ಗಂಭೀರ್ ಈಗಲೂ ನಾವು ಪಾಕಿಸ್ತಾನಕ್ಕೆ ವೈದ್ಯಕೀಯ ವೀಸಾ ನೀಡುತ್ತಿದ್ದೇವೆ. ನೀವು ಇಲ್ಲಿಗೆ ಬಂದರೆ ನಾನೇ ನಿಮ್ಮನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯುವೆ ಎಂದು ವ್ಯಂಗ್ಯ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ