Publish Date: Sun, 05 May 2019 (07:12 IST)
Updated Date: Sun, 05 May 2019 (07:14 IST)
ಬೆಂಗಳೂರು: ಈ ಬಾರಿ ಐಪಿಎಲ್ ನಲ್ಲಿ ನಿರಾಶಾದಾಯಕ ಪ್ರದರ್ಶನದೊಂದಿಗೆ ಕೂಟದಿಂದ ನಿರ್ಗಮಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ತೀವ್ರ ನಿರಾಸೆ ಮಾಡಿದೆ.
ಕೊಹ್ಲಿ ನಾಯಕತ್ವದ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಕೋಚ್ ಗ್ಯಾರಿ ಕರ್ಸ್ಟನ್ ತಲೆದಂಡದ ಬಗ್ಗೆ ಮಾತುಗಳು ಕೇಳಿಬರುತ್ತಿದೆ.
ಟೀಂ ಇಂಡಿಯಾದ ಯಶಸ್ವಿ ಕೋಚ್ ಎನಿಸಿಕೊಂಡಿದ್ದ ಕರ್ಸ್ಟನ್ ಇದು ಎರಡನೇ ವರ್ಷ ಆರ್ ಸಿಬಿ ಕೋಚ್ ಆಗಿ ಕೆಲಸ ಮಾಡಿದ್ದರು. ಆದರೆ ಎರಡು ವರ್ಷಗಳಿಂದ ಆರ್ ಸಿಬಿ ಪ್ಲೇ ಆಫ್ ಹಂತಕ್ಕೆ ಏರುವಲ್ಲಿ ವಿಫಲವಾಗಿತ್ತು. ಇದೀಗ ತಂಡದಲ್ಲಿ ಅಮೂಲಾಗ್ರ ಬದಲಾವಣೆ ಮಾಡಿದರೆ ಯಶಸ್ಸು ಸಾಧ್ಯ ಎಂದು ಕರ್ಸ್ಟನ್ ಹೇಳಿದ್ದಾರೆ.
ಆದರೆ ಸ್ವತಃ ಕರ್ಸ್ಟನ್ ರನ್ನೇ ಆರ್ ಸಿಬಿ ಮುಂದಿನ ವರ್ಷಕ್ಕೆ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ. ಭಾರೀ ಟೀಕೆಗೊಳಗಾಗಿರುವ ಆರ್ ಸಿಬಿ ಮುಂದಿನ ವರ್ಷ ಅಮೂಲಾಗ್ರ ಬದಲಾವಣೆ ಮಾಡುವುದಂತೂ ಖಂಡಿತಾ. ಯಾರೆಲ್ಲಾ ಸ್ಥಾನ ಉಳಿಸಿಕೊಳ್ಳುತ್ತಾರೆ ನೋಡಬೇಕಷ್ಟೇ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ