Publish Date: Sat, 04 May 2019 (08:29 IST)
Updated Date: Sat, 04 May 2019 (08:31 IST)
ಮೊಹಾಲಿ: ಕೋಲ್ಕೊತ್ತಾ ನೈಟ್ ರೈಡರ್ಸ್ ನಲ್ಲಿ ಆಂತರಿಕ ಸಂಘರ್ಷ ತಾರಕಕ್ಕೇರಿದೆ ಎನ್ನುವುದು ನಿನ್ನೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ ಬಹಿರಂಗಗೊಂಡಿದೆ.
ನಾಯಕ ದಿನೇಶ್ ಕಾರ್ತಿಕ್ ಮತ್ತು ಸಹ ಆಟಗಾರ ಆಂಡ್ರೆ ರಸೆಲ್ ಇತ್ತೀಚೆಗಷ್ಟೇ ಪರಸ್ಪರ ಮಾಧ್ಯಮಗಳ ಮೂಲಕ ಟಾಂಗ್ ಕೊಟ್ಟುಕೊಂಡಿದ್ದರು. ಇದೀಗ ನಿನ್ನೆ ನಡೆದ ಪಂದ್ಯದಲ್ಲಿ ನಾಯಕ ಕಾರ್ತಿಕ್ ಸಹ ಆಟಗಾರರ ಮೇಲೆ ವಿಪರೀತ ಕೂಗಾಡುತ್ತಿದ್ದುದು ಕಂಡುಬರುತ್ತಿತ್ತು.
ಈ ನಡುವೆ ಕೋಚ್ ಜಾಕಸ್ ಕಾಲಿಸ್ ತಂಡದ ಆಟಗಾರರ ಜತೆಗೆ ಮಾತನಾಡುವಾಗ ಯಾವುದೋ ವಿಚಾರಕ್ಕೆ ಕಾರ್ತಿಕ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದುದು ಸ್ಪಷ್ಟವಾಗಿತ್ತು. ಈ ಬಗ್ಗೆ ಪಂದ್ಯದ ನಂತರ ಪ್ರಶ್ನಿಸಿದಾಗ ನನಗೆ ಬೌಲರ್ ಗಳು ಮತ್ತು ಫೀಲ್ಡರ್ ಗಳ ಸಂಯೋಜನೆ ಬಗ್ಗೆ ಅಸಮಾಧಾನವಿತ್ತು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದೆ ಎಂದು ಕಾರ್ತಿಕ್ ಸಮಜಾಯಿಷಿ ನೀಡಿದ್ದಾರೆ. ಅದೇನೇ ಇದ್ದರೂ ಕೆಕೆಆರ್ ಇದೀಗ ಒಡೆದ ಮನೆಯಾಗಿರುವುದಂತೂ ಸ್ಪಷ್ಟ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ