Publish Date: Sat, 04 May 2019 (08:15 IST)
Updated Date: Sat, 04 May 2019 (08:17 IST)
ಜೈಪುರ: ರಾಜಸ್ಥಾನ್ ರಾಯಲ್ಸ್ ಈ ಬಾರಿ ಐಪಿಎಲ್ ನಲ್ಲಿ ಅಜಿಂಕ್ಯಾ ರೆಹಾನೆ ನಾಯಕತ್ವದಲ್ಲಿ ಕ್ಲಿಕ್ ಆಗಲಿಲ್ಲ ಎಂದು ಫ್ರಾಂಚೈಸಿ ನಾಯಕತ್ವವನ್ನು ಆಸ್ಟ್ರೇಲಿಯಾ ಮೂಲದ ಸ್ಟೀವ್ ಸ್ಮಿತ್ ಮಡಿಲಿಗೆ ಹಾಕಿತ್ತು.
ಹಾಗಿದ್ದರೂ ಅರಸಿ ಅರಸಿ ರಾಜಸ್ಥಾನ್ ನಾಯಕತ್ವ ಮತ್ತೆ ರೆಹಾನೆ ಕಾಲಿಗೆ ಒರೆಸಿ ಬಂದಿದೆ. ಸ್ಮಿತ್ ವಿಶ್ವಕಪ್ ಗೆ ಸಿದ್ಧತೆ ಮಾಡಿಕೊಳ್ಳಲು ತವರು ಆಸ್ಟ್ರೇಲಿಯಾಕ್ಕೆ ಮರಳಿದ್ದಾರೆ. ಹೀಗಾಗಿ ಮತ್ತೆ ಫ್ರಾಂಚೈಸಿ ಅನುಭವಿ ರೆಹಾನೆ ಬಳಿಯೇ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ನಾಯಕತ್ವ ವಹಿಸಲು ಸೂಚಿಸಿದೆ.
ರೆಹಾನೆ ಪ್ರಸ್ತುತ ಅದ್ಭುತ ಫಾರ್ಮ್ ನಲ್ಲಿದ್ದು, ಅವರ ಫಾರ್ಮ್ ಮತ್ತು ಅನುಭವ ತಂಡಕ್ಕೆ ಸಹಾಯವಾಗಲಿದೆ. ಈ ಮೊದಲು ಅವರಿಗೆ ಒತ್ತಡ ಹೇರದಿರಲು ನಾಯಕತ್ವವನ್ನು ಸ್ಮಿತ್ ಗೆ ವಹಿಸಲಾಗಿತ್ತು. ಈಗ ಸ್ಮಿತ್ ತವರಿಗೆ ಮರಳಿರುವುದರಿಂದ ರೆಹಾನೆಗೆ ಮತ್ತೆ ನಾಯಕತ್ವ ವಹಿಸಲಾಗಿದೆ ಎಂದು ರಾಜಸ್ಥಾನ್ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ