Publish Date: Sat, 04 May 2019 (08:19 IST)
Updated Date: Sat, 04 May 2019 (08:20 IST)
ನವದೆಹಲಿ: ಟೀಂ ಇಂಡಿಯಾದ ಮೆಂಟಲ್ ಕಂಡೀಷನಿಂಗ್ ಕೋಚ್ ಆಗಿ ಕೆಲಸ ಮಾಡಿದ್ದ ಪ್ಯಾಡಿ ಅಪ್ಟನ್ ಭಾರತೀಯ ಕ್ರಿಕೆಟಿಗರ ಬಗ್ಗೆ ಒಂದೊಂದೇ ಸ್ಪೋಟಕ ರಹಸ್ಯಗಳನ್ನು ಹರಿಯಬಿಡುತ್ತಿದ್ದಾರೆ.
ಪ್ಯಾಡಿ ತಮ್ಮ ಆತ್ಮಕತೆ ದಿ ಬೇರ್ ಫೂಟ್ ಕೋಚ್ ಎಂಬ ಪುಸ್ತಕದಲ್ಲಿ ಗೌತಮ್ ಗಂಭೀರ್ ಮಾನಸಿಕವಾಗಿ ಅಭದ್ರತೆಯಿಂದ ಬಳಲುತ್ತಿದ್ದರು ಎಂದು ಬರೆದುಕೊಂಡಿದ್ದ ವಿಚಾರ ಭಾರೀ ಸುದ್ದಿಯಾಗಿತ್ತು.
ಇದೀಗ ಆ ಪುಸ್ತಕದಲ್ಲಿ ಇನ್ನೂ ಒಂದು ಸ್ಪೋಟಕ ಮಾಹಿತಿಯಿದ್ದು, ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಕೂಡಾ ಆಗಿದ್ದ ‘ವಾಲ್’ ರಾಹುಲ್ ದ್ರಾವಿಡ್ ಗೆ ವೇಗಿ ಶ್ರೀಶಾಂತ್ ಸಾರ್ವಜನಿಕವಾಗಿ ಬೈದಿದ್ದರು. ಕೊನೆಗೆ ಶ್ರೀಶಾಂತ್ ಕೆಟ್ಟ ನಡವಳಿಕೆಯಿಂದ ಬೇಸತ್ತು ಅವರನ್ನು ಮನೆಗೆ ಕಳುಹಿಸಲಾಯಿತು ಎಂದು ಬರೆದಿರುವ ಸಂಗತಿ ಬಹಿರಂಗಗೊಂಡಿದೆ.
ಇದಾದ ಕೆಲವೇ ದಿನಗಳ ಬಳಿಕ ಶ್ರೀಶಾಂತ್ ಐಪಿಎಲ್ ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ಅರೆಸ್ಟ್ ಆದರು ಎಂದಿದ್ದಾರೆ. ಆದರೆ ಶ್ರೀಶಾಂತ್ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ. ಅಪ್ಟನ್ ರನ್ನು ಸುಳ್ಳುಗಾರ ಎಂದು ಜರೆದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ