Publish Date: Sun, 05 May 2019 (07:15 IST)
Updated Date: Sun, 05 May 2019 (07:17 IST)
ಚೆನ್ನೈ: ಐಪಿಎಲ್ ನಲ್ಲಿ ಧೋನಿ ಚೆನ್ನೈ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಜತೆಗೆ ಮೈದಾನ ಸಿಬ್ಬಂದಿಗೂ ಪ್ರಿಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಪಂದ್ಯಕ್ಕೆ ಮೈದಾನ ಸಜ್ಜುಗೊಳಿಸುವ ಸಿಬ್ಬಂದಿಗಳ ಜತೆಗೆ ಫೋಟೋ ತೆಗೆಸಿಕೊಂಡು ಧೋನಿ ತಮ್ಮ ಸರಳತನ ಪ್ರದರ್ಶಿಸಿದ್ದರು. ಇದೀಗ ತಾವು ಬಾರಿಸುವ ಪ್ರತೀ ಬೌಂಡರಿ, ಸಿಕ್ಸರ್ ಗಳಿಗೆ ಕುಣಿದು ಚಿಯರ್ ಮಾಡುವ ಚಿಯರ್ ಲೀಡರ್ಸ್ ಗಳನ್ನೂ ಧೋನಿ ಖುಷಿಪಡಿಸಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಮುಗಿದ ಬಳಿಕ ಮೈದಾನ ಸಿಬ್ಬಂದಿ ಜತೆಗೆ ಫೋಟೋ ತೆಗೆಸಿಕೊಂಡ ಧೋನಿ ಅವರನ್ನೂ ಖುಷಿಪಡಿಸಿದ್ದಾರೆ. ಧೋನಿ ಚಿಯರ್ ಲೀಡರ್ ಗಳ ಮಧ್ಯದಲ್ಲಿ ನಿಂತ ಫೋಟೋ ನೋಡಿ ಅಭಿಮಾನಿಗಳು, ಈ ಫೋಟೋವನ್ನು ಖಂಡಿತಾ ಸಾಕ್ಷಿ ಧೋನಿ ಅನ್ ಲೈಕ್ ಮಾಡುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಪಂದ್ಯದಲ್ಲಿ ಜಾಣ ನಾಯಕನಾಗಿರುವ ಧೋನಿ ಮೈದಾನದ ಹೊರಗೂ ತಾವು ಅಭಿಮಾನಿಗಳ ಪ್ರಿಯ ವ್ಯಕ್ತಿ ಎಂದು ಸಾಬೀತುಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ