Publish Date: Wed, 08 May 2019 (07:27 IST)
Updated Date: Wed, 08 May 2019 (07:29 IST)
ಚೆನ್ನೈ: ನಿನ್ನೆ ನಡೆದ ಐಪಿಎಲ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿ ಫೈನಲ್ ಗೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ ಕೆ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಯಿತು. ನಾಯಕ ಧೋನಿ 37, ಅಂಬಟಿ ರಾಯುಡು 42 ರನ್ ಗಳಿಸಿದರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಮುಂಬೈಗೆ ಸೂರ್ಯಕುಮಾರ್ ಯಾದವ್ ಆಸರೆಯಾದರು. ಯಾದವ್ 71 ರನ್ ಸಿಡಿಸಿದರೆ ಇಶಾನ್ ಕಿಶನ್ 28 ರನ್ ಗಳಿಸಿ ತಂಡವನ್ನು 18.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆಲುವಿನ ದಡ ಮುಟ್ಟಿಸಿದರು. ಇದರೊಂದಿಗೆ ಮುಂಬೈ ಐಪಿಎಲ್ ಫೈನಲ್ ಗೇರಿತು.
ಆದರೆ ಚೆನ್ನೈ ಕತೆ ಇಷ್ಟಕ್ಕೇ ಮುಗಿದಿಲ್ಲ. ಡೆಲ್ಲಿ ಮತ್ತು ಹೈದರಾಬಾದ್ ನಡುವೆ ನಡೆಯಲಿರುವ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸೋತ ತಂಡದೊಂದಿಗೆ ಮತ್ತೊಂದು ಪಂದ್ಯವಾಡಿ ಗೆದ್ದರೆ ಫೈನಲ್ ಗೇರುವ ಅವಕಾಶವಿದೆ. ಹಾಗಿದ್ದರೂ ಕೂಟದಲ್ಲಿ ಆರಂಭದಿಂದಲೂ ಅಗ್ರಗಣ್ಯನಾಗಿದ್ದ ಚೆನ್ನೈಗೆ ಈ ಸೋಲು ನಿಜಕ್ಕೂ ಶಾಕಿಂಗ್.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ