Select Your Language

Notifications

webdunia
webdunia
webdunia
webdunia

ನೀನೇ ನನ್ನ ಬೆಸ್ಟ್ ಪಾರ್ಟನರ್ ಎಂದು ಕೆಎಲ್ ರಾಹುಲ್ ಗೆ ಹೇಳಿದ್ದು ಯಾರು ಗೊತ್ತೇ?

ಕೆಎಲ್ ರಾಹುಲ್
ಮೊಹಾಲಿ: ನಾನು ನೋಡಿದ ಮತ್ತು ಜತೆಯಾಟವಾಡಿದ ಜತೆಗಾರರ ಪೈಕಿ ನೀನೇ ಬೆಸ್ಟ್ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಐಪಿಎಲ್ ಆಡುವ ಕೆಎಲ್ ರಾಹುಲ್ ಗೆ ಕ್ರಿಸ್ ಗೇಲ್ ಕೊಂಡಾಡಿದ್ದಾರೆ.


ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವೂ ಜತೆಯಾಗಿ ಆಡಿದ್ದ ಈ ಜೋಡಿ ಪಂಜಾಬ್ ಪರವೂ ಆರಂಭಿಕರಾಗಿ ಜತೆಯಾಗಿ ಕಣಕ್ಕಿಳಿಯುತ್ತಿದೆ. ಇಬ್ಬರ ನಡುವಿನ ಹೊಂದಾಣಿಕೆ ಚೆನ್ನಾಗಿದೆ. ಹಾಗೆಯೇ ಮೈದಾನದ ಹೊರಗೆಯೂ ಉತ್ತಮ ಸ್ನೇಹಿತರಾಗಿದ್ದಾರೆ.

ಇದೀಗ ಗೇಲ್ ಪಂದ್ಯದ ನಂತರ ನಡೆಯುವ ಚಿಟ್ ಚ್ಯಾಟ್ ನಲ್ಲಿ ಕೆಎಲ್ ರಾಹುಲ್‍ ರನ್ನು ಹೊಗಳಿದ್ದು ‘ನೀನು ನಾನು ಆಡಿರುವವ ಪೈಕಿ ಬೆಸ್ಟ್ ಪಾರ್ಟನರ್. ನಮ್ಮ ನಡುವೆ ವಿಕೆಟ್ ನಡುವಿನ ತಾಳ ಮೇಳ, ಹೊಂದಾಣಿಕೆ ಅದ್ಭುತವಾಗಿದೆ’ ಎಂದು ಗೇಲ್ ಕೊಂಡಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಿಂದ ಹೊರಬಿದ್ದ ಕೇದಾರ್ ಜಾಧವ್