Publish Date: Mon, 06 May 2019 (07:59 IST)
Updated Date: Mon, 06 May 2019 (08:01 IST)
ಮೊಹಾಲಿ: ಗೆಲುವಿನ ಕುದುರೆ ಚೆನ್ನೈ ಸೂಪರ್ ಕಿಂಗ್ಸ್ ನಾಗಲೋಟಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಕಡಿವಾಣ ಹಾಕಿದೆ.
ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟಿಂಗ್ ಮಾಡಿ 5 ವಿಕೆಟ್ ನಷ್ಟಕ್ಕೆ 170 ರನ್ ಗಳಿಸಿತು. ಸಾಮಾನ್ಯವಾಗಿ ಚಾಣಕ್ಷ್ಯ ನಾಯಕ ಧೋನಿಗೆ ಎದುರಾಳಿಗಳನ್ನು ಇಷ್ಟು ರನ್ ಸಾಕು.
ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಕನ್ನಡಿಗ ಬ್ಯಾಟ್ಸ್ ಮನ್ ಕೆಎಲ್ ರಾಹುಲ್ 36 ಎಸೆತಗಳಲ್ಲಿ 71 ರನ್ ಗಳಿಸಿ ಎದುರಾಳಿಗಳಿಂದ ಜಯ ಕಸಿದುಕೊಂಡರು. ರಾಹುಲ್ ಬ್ಯಾಟಿಂಗ್ ಅಬ್ಬರದಿಂದಾಗಿ ಪಂಜಾಬ್ 18 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ರಾಹುಲ್ ಅಮೋಘ ಬ್ಯಾಟಿಂಗ್ ಗೆ ಎದುರಾಳಿ ನಾಯಕ ಧೋನಿ ಕೂಡಾ ಫಿದಾ ಆಗಿ ಪಂದ್ಯದ ನಂತರ ಹೊಗಳಿಕೆ ನೀಡಿದರು. ನಿನ್ನೆ ಸಂಪೂರ್ಣವಾಗಿ ಪಂಜಾಬ್ ನ ದಿನವಾಗಿತ್ತು ಎಂದು ಧೋನಿ ಹೊಗಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ