Publish Date: Mon, 06 May 2019 (07:45 IST)
Updated Date: Mon, 06 May 2019 (07:47 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಗಡ್ಡ ಶೇವ್ ಮಾಡಿಕೊಳ್ಳುವ ಫೋಟೋವನ್ನು ಪ್ರಕಟಿಸಿದ್ದು, ಇಂಟರೆಸ್ಟಿಂಗ್ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.
ಇದುವರೆಗೆ ತಾನು ತನ್ನ ಗಡ್ಡವನ್ನು ಬೇರೆಯವರಿಗೆ ಶೇವ್ ಮಾಡಲು ಬಿಟ್ಟಿರಲಿಲ್ಲ. ನನ್ನ ಗಡ್ಡವನ್ನು ನಾನೇ ಕತ್ತರಿಸುತ್ತಿದ್ದೆ. ಇದೇ ಮೊದಲ ಬಾರಿಗೆ ಮಹಿಳಾ ಬಾರ್ಬರ್ ನಿಂದ ಆ ದಾಖಲೆ ಅಳಿಸಿಹೋಯಿತು ಎಂದು ಸಚಿನ್ ಬರೆದುಕೊಂಡಿದ್ದಾರೆ.
ಈ ಮೂಲಕ ಮಹಿಳಾ ಬಾರ್ಬರ್ ಗಳಿಗೆ ತನ್ನ ಬೆಂಬಲ ಸೂಚಿಸಿದ್ದಾರೆ. ಕ್ರಿಕೆಟ್ ನಲ್ಲಿ ಹಲವು ದಾಖಲೆಗಳ ಒಡೆಯನಾಗಿರುವ ಸಚಿನ್ ನಿವೃತ್ತ ಜೀವನದಲ್ಲೂ ಹೊಸ ದಾಖಲೆ ಮಾಡಿದ್ದಾರೆ!
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ