Select Your Language

Notifications

webdunia
webdunia
webdunia
webdunia

ಮುಂದಿನ ಬಾರಿ ಐಪಿಎಲ್ ನಲ್ಲಿ ಕಾಣಿಸಿಕೊಳ್ಬೇಡಿ! ರಾಬಿನ್ ಉತ್ತಪ್ಪಗೆ ಟ್ವಿಟರಿಗರ ತಾಕೀತು!

ಮುಂದಿನ ಬಾರಿ ಐಪಿಎಲ್ ನಲ್ಲಿ ಕಾಣಿಸಿಕೊಳ್ಬೇಡಿ! ರಾಬಿನ್ ಉತ್ತಪ್ಪಗೆ ಟ್ವಿಟರಿಗರ ತಾಕೀತು!
ಕೋಲ್ಕೊತ್ತಾ , ಸೋಮವಾರ, 6 ಮೇ 2019 (08:10 IST)
ಕೋಲ್ಕೊತ್ತಾ: ಕೋಲ್ಕೊತ್ತಾ ನೈಟ್ ರೈಡರ್ಸ್ ಪರ ಐಪಿಎಲ್ ಆಡುವ ರಾಬಿನ್ ಉತ್ತಪ್ಪ ತಮ್ಮ ನಿಧಾನಗತಿಯ ಬ್ಯಾಟಿಂಗ್ ನಿಂದ ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಪ್ಪ 16 ರನ್ ಗಳಿಸಲು ಬರೋಬ್ಬರಿ 27 ಎಸೆತ ಬಳಸಿಕೊಂಡರು. ಬಳಿಕ 47 ಎಸೆತಗಳಲ್ಲಿ 41 ರನ್ ಗಳಿಸಿ ಔಟಾದರು. ರಾಬಿನ್ ರ ಈ ನಿಧಾನಗತಿಯ ಇನಿಂಗ್ಸ್ ನಿಂದ ಕೋಲ್ಕೊತ್ತಾ ಎದುರಾಳಿಗಳಿಗೆ ಗೆಲುವಿಗೆ ಕೇವಲ 134 ರನ್ ಗುರಿ ನೀಡಲಷ್ಟೇ ಶಕ್ತವಾಯಿತು. ಈ ಮೊತ್ತವನ್ನು ಮುಂಬೈ ಸುಲಭವಾಗಿ ಬೆನ್ನತ್ತಿ ಗೆಲುವು ಸಾಧಿಸಿತು.

ಹೀಗಾಗಿ ಟ್ವಿಟರಿಗರು ರಾಬಿನ್ ಗೆ ಲೇವಡಿ ಮಾಡಿದ್ದು, ಮುಂದಿನ ಬಾರಿ ಐಪಿಎಲ್ ನಲ್ಲಿ ಈ ಆಟಗಾರರು ಕಾಣಿಸಿಕೊಳ್ಳಬಾರದು ಎಂದು ಪಟ್ಟಿ ಮಾಡಿದ್ದಾರೆ. ಮತ್ತೆ ಕೆಲವರು ಉತ್ತಪ್ಪರನ್ನು ಮುಂದಿನ ವರ್ಷ ಯಾವ ತಂಡದವರೂ ಖರೀದಿ ಮಾಡಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಲ್ ರಾಹುಲ್ ಹೊಗಳಿದ ಧೋನಿ