ಚೆನ್ನೈ: ಕಳೆದ ವರ್ಷದಂತೇ ಈ ವರ್ಷವೂ ಕೇಧಾರ್ ಜಾದವ್ ಐಪಿಎಲ್ ನಿಂದ ಗಾಯಗೊಂಡು ಹೊರಬಿದ್ದಿದ್ದಾರೆ. ಮಹತ್ವದ ಘಟ್ಟದಲ್ಲಿ ಹೊರಬಿದ್ದು ನಿರಾಶೆ ಅನುಭವಿಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಆಟಗಾರರಾಗಿರುವ ಕೇದಾರ್ ಜಾಧವ್ ಪ್ಲೇ ಆಫ್ ಹಂತದಲ್ಲಿ ಹೊರಬಿದ್ದಿರುವುದು ತಂಡಕ್ಕೆ ನಿಜಕ್ಕೂ ಆಘಾತ ನೀಡಿದೆ.
ಕಳೆದ ವರ್ಷವೂ ಕೇದಾರ್ ಜಾಧವ್ ಭುಜದ ಗಾಯದಿಂದಾಗಿ ಅರ್ಧದಲ್ಲೇ ಐಪಿಎಲ್ ನಿಂದ ಹೊರಬಿದ್ದಿದ್ದರು. ಈ ವರ್ಷವೂ ಪ್ಲೇ ಆಫ್ ಹಂತದಲ್ಲೇ ಹೊರಬಿದ್ದಿದ್ದಾರೆ. ಮುಂದೆ ವಿಶ್ವಕಪ್ ತಂಡದಲ್ಲಿ ಕೇದಾರ್ ಜಾಧವ್ ಆಡಲಿರುವುದರಿಂದ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ ಇರಲು ಈಗಲೇ ಐಪಿಎಲ್ ನಿಂದ ಹೊರಬಿದ್ದು ವಿಶ್ರಾಂತಿ ಪಡೆಯಲು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ