Publish Date: Wed, 08 May 2019 (07:09 IST)
Updated Date: Wed, 08 May 2019 (07:10 IST)
ಮುಂಬೈ: ಧೋನಿ ಕ್ರಿಕೆಟ್ ವಿಚಾರದಲ್ಲಿ ಸ್ವಾರ್ಥ ರಹಿತ ವ್ಯಕ್ತಿ ಎನ್ನುವುದಕ್ಕೆ ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಗಿದ ಬಳಿಕ ನಡೆದ ಈ ಘಟನೆ ಸಾಬೀತುಪಡಿಸಿದೆ.
ಯುವ ಕ್ರಿಕೆಟಿಗರು ಧೋನಿಯನ್ನು ತಮ್ಮ ವಿಕೆಟ್ ಕೀಪಿಂಗ್ ಐಡಲ್ ಎಂದು ಪರಿಗಣಿಸುತ್ತಾರೆ. ಅದಕ್ಕೆ ತಕ್ಕ ಹಾಗೆ ಧೋನಿ ಕೂಡಾ ಯುವ ಕ್ರಿಕೆಟಿಗರಿಗೆ ಬೆಂಬಲವಾಗಿ ನಿಲ್ಲುತ್ತಾರೆ.
ಇದೀಗ ಪಂಜಾಬ್ ವಿರುದ್ಧ ಪಂದ್ಯ ಮುಗಿದ ಬಳಿಕ ಸಿಎಸ್ ಕೆ ನಾಯಕ ಧೋನಿ ಎದುರಾಳಿ ತಂಡದ ವಿಕೆಟ್ ಕೀಪರ್ ಗಳಾದ ಕೆಎಲ್ ರಾಹುಲ್ ಮತ್ತು ಪೂರನ್ ಗೆ ಮೈದಾನದಲ್ಲಿಯೇ ವಿಕೆಟ್ ಕೀಪಿಂಗ್ ಬಗ್ಗೆ ಪಾಠ ಮಾಡಿದ್ದಾರೆ. ಕೆಲವೊಂದು ತಂತ್ರಗಾರಿಕೆಯನ್ನು ಈ ಯುವ ವಿಕೆಟ್ ಕೀಪರ್ ಗಳಿಗೆ ನೀಡಿದ ಧೋನಿ ತಾವು ಸ್ವಾರ್ಥ ರಹಿತ ವ್ಯಕ್ತಿ ಎಂದು ಸಾಬೀತುಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ