Publish Date: Sun, 05 May 2019 (18:45 IST)
Updated Date: Sun, 05 May 2019 (18:47 IST)
ನಿಧಿಗಳ್ಳರು ಮಾಡಬಾರದ ಕೆಲಸ ಮಾಡಿರುವ ಘಟನೆ ನಡೆದಿದೆ.
ನಿಧಿಗಳ್ಳರಿಂದ ದೇವಸ್ಥಾನದ ನಂದಿ ವಿಗ್ರಹ ಹಾಗೂ ಮೂರ್ತಿ ಧ್ವಂಸವಾಗಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಕ್ಕಳಮೇಲಿ ಗ್ರಾಮದಲ್ಲಿ ಘಟನೆ ನಡೆದಿದೆ.
ಶಂಭುಲಿಂಗ ದೇವಸ್ಥಾನದಲ್ಲಿನ ನಂದಿ ವಿಗ್ರಹ ಹಾಗೂ ಶಿವಲಿಂಗ ಧ್ವಂಸಕ್ಕೆ ಯತ್ನ ನಡೆಸಿದ್ದಾರೆ. ನಿಧಿಗಳ್ಳರ ಕೈವಾಡದ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
ಕಕ್ಕಳಮೇಲಿ ಗ್ರಾಮದಿಂದ ಸ್ವಲ್ಪ ದೂರದಲ್ಲಿದೆ ಶಂಭುಲಿಂಗ ದೇವಾಲಯ.