Publish Date: Wed, 13 Feb 2019 (12:28 IST)
Updated Date: Wed, 13 Feb 2019 (12:30 IST)
ಬಿಜೆಪಿ ಶಾಸಕರ ಬೆಂಬಲಿಗರೊಬ್ಬರು ಮನೆಯೊಂದನ್ನು ಧ್ವಂಸಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಶಾಸಕರ ವಿರುದ್ಧವೂ ಆ ಕುಟುಂಬ ಆಕ್ರೋಶ ವ್ಯಕ್ತಪಡಿಸಿದೆ.
ಮೂಡಿಗೆರೆ ಶಾಸಕರವಿರುದ್ಧ ದೌರ್ಜನ್ಯ ಆರೋಪ ಕೇಳಿಬಂದಿದೆ. ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಆರೋಪ ಕೇಳಿಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಲ್ಮನೆ ಗ್ರಾಮದ ಲೋಕೇಶ್ ಕುಟುಂಬಸ್ಥರು ಶಾಸಕರ ಹಾಗೂ ಶಾಸಕರ ಬೆಂಬಲಿಗರ ವಿರುದ್ಧ ಆರೋಪ ಮಾಡಿದ್ದಾರೆ.
ಲೋಕೇಶ್ ಗೆ ಸಂಬಂಧಿಸಿದ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕಾಫಿ ಕೊಯ್ದುಕೊಂಡು ಹೋಗಲಾಗಿದೆ. ಕಲ್ಮನೆ ಗ್ರಾಮದ ಲೋಕೇಶ್ ಗೆ ಸೇರಿರುವ ಜಮೀನಿನಲ್ಲಿ ಈ ಕೃತ್ಯ ನಡೆದಿದೆ. ಅಲ್ಲದೇ ಶಾಸಕರ ಬೆಂಬಲಿಗರಿಂದ ಮನೆ ದ್ವಂಸವಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ. ಶಾಸಕರ ಬೆಂಬಲಿಗರಿಂದ ಲೋಕೇಶ್ ಕುಟುಂಬದವರಿಗೆ ಕೊಲೆ ಬೆದರಿಕೆ ಹಾಕಲಾಗುತ್ತಿದೆಯಂತೆ.
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ರು ಪ್ರಯೋಜನವಾಗಿಲ್ಲ ಎಂದು ಆರೋಪ ಮಾಡಲಾಗುತ್ತಿದೆ. ಹೀಗಾಗಿ ಬಾಳೂರು ಪೊಲೀಸ್ ಠಾಣೆ ಮುಂದೆ ಧರಣಿ ಕೂಡಲು ಕುಟುಂಬಸ್ಥರು ನಿರ್ಧಾರ ಮಾಡಿದ್ದಾರೆ.