Publish Date: Wed, 13 Feb 2019 (12:10 IST)
Updated Date: Wed, 13 Feb 2019 (12:12 IST)
ಲೋಕ ಕಲ್ಯಾಣಕ್ಕಾಗಿ ಸ್ವಾಮೀಜಿಯೊಬ್ಬರು ಭೂಮಿಯಲ್ಲಿ ಜೀವಂತ ಅನುಷ್ಠಾನ ಕುಳಿತಿದ್ದಾರೆ.
ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಕಲಕಂಭ ಗ್ರಾಮದಲ್ಲಿ ಸ್ವಾಮೀಜಿಯೊಬ್ಬರು ಅನುಷ್ಠಾನ ಕೈಗೊಂಡಿದ್ದಾರೆ. ಸೇಡಂ ತಾಲೂಕಿನ ಊಡಗಿ ರಸ್ತೆಯಲ್ಲಿ ಯಿರುವ ವಿಶ್ವಲಿಂಗ ವಿಷ್ಣು ಆಶ್ರಮದ ಸ್ವಾಮೀಜಿ ಶ್ರೀಮಂತ ತಾತನವರ ಶಿಷ್ಯರಾಗಿರುವ ಲೋಕೇಶ್ ಸ್ವಾಮೀಜಿ ಭೂಮಿಯಲ್ಲಿ ಅನುಷ್ಠಾನಕ್ಕೆ ಮುಂದಾಗಿದ್ದಾರೆ.
ಕಲಕಂಭ ಗ್ರಾಮ ದೇವತೆ ದೇವಸ್ಥಾನದ ಬಳಿ ಭೂಮಿಯೊಳಗೆ ಅನುಷ್ಠಾನಕ್ಕೆ ಕುಳಿತಿದ್ದಾರೆ. ಮೂರು ದಿನಗಳ ಕಾಲ ಭೂಮಿಯಲ್ಲಿ ಅನುಷ್ಠಾನ ಕೈಗೊಂಡಿದ್ದಾರೆ ಸ್ವಾಮೀಜಿ. ಈ ಮೊದಲು ಮೂರು ದಿನಗಳ ಕಾಲ ಅದೇ ಮಠದ ಹಿರಿಯ ಸ್ವಾಮೀಜಿ ಶ್ರೀಮಂತ ತಾತ ಸ್ವಾಮೀಜಿ ಅನುಷ್ಠಾನ ಪೂರ್ಣಗೊಳಿಸಿದ್ದರು.