Select Your Language

Notifications

webdunia
webdunia
webdunia
webdunia

ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ

ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ
ದಾವಣಗೆರೆ , ಗುರುವಾರ, 31 ಜನವರಿ 2019 (20:26 IST)
ಕಾಣದೇ ಇರುವ ಭಗವಂತನನ್ನು ಹುಡುಕುವ ಪ್ರಯತ್ನ ಮಾಡಬೇಡಿ. ಬದಲಾಗಿ ಮಕ್ಕಳಲ್ಲಿ, ಬಡವರಲ್ಲಿ, ದೀನ-ದುರ್ಬರಲ್ಲಿ ಭಗವಂತನನ್ನು ಕಂಡು ಶ್ರಮಿಸಿದರೆ ಭಗವಂತ ಒಲಿಯುತ್ತಾನೆ ಎಂಬುದು ಸಿದ್ಧಗಂಗಾ ಶ್ರೀಗಳ ಸಂದೇಶವಾಗಿದೆ ಎಂದು ಅವರಗೊಳ್ಳದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ದಾವಣಗೆರೆಯ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ತೂಮಕೂರಿನ ಸಿದ್ಧಗಂಗಾ ಶ್ರೀಗಳ ಪುಣ್ಯಸ್ಮರಣೆ ಅನ್ನದಾಸೋಹ ಕಾರ್ಯಕ್ರಮದಲ್ಲಿ ಸುಮಾರು 10000 ಜನರಿಗೆ ದಾಸೋಹ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿದ್ಧಗಂಗಂಗಾ ಶ್ರೀಗಳು ಕಾಯಕದಲ್ಲಿ ನಿರತರಾಗಿ, ಕಾಯಕವೇ ಕೈಲಾಸ ಎಂದು ತಿಳಿದು, ಕಾಯಕವನ್ನು ಮಾಡುವುದರ ಮುಖಾಂತರ ಸಂದೇಶ ನೀಡಿದ್ದಾರೆ ಎಂದು ಹೇಳಿದರು.  

ಜಾತಿ, ಮತ, ಪಂಥ ನೋಡದೇ ಬಡ ವಿದ್ಯಾರ್ಥಿಗಳಿಗೆ ಜ್ಞಾನದ ಧಾರೆ ಎರೆಯುವ ಮುಖಾಂತರ ದಾಸೋಹ ಮೂರ್ತಿಗಳಾಗಿ ಸಂದೇಶ ಸಾರಿದ್ದಾರೆ ಎಂದು ಹೇಳಿದರು.  ಈ ಅನ್ನದಾನ ದಾಸೋಹ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್, ಸಂಸ್ಥೆಯ ಮುಖ್ಯಸ್ಥೆ ಜಸ್ಟಿನ್ ಡಿಸೋಜಾ ಭಾಗಿಯಾಗಿದ್ದರು.




Share this Story:

Follow Webdunia kannada

ಮುಂದಿನ ಸುದ್ದಿ

ಕೈ ಶಾಸಕರ ಹೊಡೆದಾಟ ಪ್ರಕರಣ: ಗೃಹ ಸಚಿವರಿಗೆ ಸಿಎಂ ಸೂಚನೆ