Select Your Language

Notifications

webdunia
webdunia
webdunia
webdunia

ಇಂದು ಸಿದ್ದಗಂಗಾಶ್ರೀಗಳ 11 ದಿನದ ಪುಣ್ಯಾರಾಧನೆ

ಇಂದು ಸಿದ್ದಗಂಗಾಶ್ರೀಗಳ 11 ದಿನದ ಪುಣ್ಯಾರಾಧನೆ
ಬೆಂಗಳೂರು , ಗುರುವಾರ, 31 ಜನವರಿ 2019 (15:40 IST)
ಬೆಂಗಳೂರು : ಸಿದ್ದಗಂಗಾಶ್ರೀಗಳು ಶಿವೈಕ್ಯರಾಗಿ ಇಂದಿಗೆ 11 ದಿನವಾದ ಹಿನ್ನಲೆಯಲ್ಲಿ ಮಠದಲ್ಲಿ ಇಂದು ಶ್ರೀಗಳ ಪುಣ್ಯಾರಾಧನೆ ಕಾರ್ಯಕ್ರಮ ನಡೆಯುತ್ತಿದೆ.


ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಮಠದ ಸುತ್ತಮುತ್ತ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಇಂದು ಸಿದ್ಧಗಂಗೆಯಲ್ಲಿ ಬೆಳಗ್ಗೆ 5ರಿಂದ ಶ್ರೀಗಳ ಗದ್ದುಗೆ ಪೂಜೆ ಆರಂಭವಾಗಿದ್ದು, ಸಿದ್ಧಲಿಂಗ ಶ್ರೀಗಳು ಸೇರಿ ವಿವಿಧ ಮಠಾಧೀಶರು ಹಾಗೂ ವಿದ್ಯಾರ್ಥಿಗಳು  ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.


ಸಿದ್ಧಲಿಂಗ ಶ್ರೀಗಳ ನೇತೃತ್ವದಲ್ಲಿ ಬೆಳಿಗ್ಗೆ8.30ಕ್ಕೆ ಬೆಳ್ಳಿರಥದಲ್ಲಿ ಸ್ವಾಮೀಜಿಯ ಭಾವಚಿತ್ರದ ಮೆರವಣೆಗೆ ಆರಂಭವಾಗಿದೆ. ಶ್ರೀಗಳ ಗದ್ದುಗೆಯಿಂದ ಆರಂಭವಾದ ಮೆರವಣಿಗೆ ಗೋಸಲ ಸಿದ್ದೇಶ್ವರ ವೇದಿಕೆವರೆಗೆ ಮೆರವಣಿಗೆ ಸಾಗಲಿದೆ. ಮೆರವಣಿಗೆಯಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ನಿಷೇ​ಧಿಸಿ ಪ್ರತಿ​ಭ​ಟನೆ ನಡೆ​ಸಿದ ಮಹಿ​ಳೆ​ಯರು; ಏಕಾ​ಏಕಿ ಮದ್ಯ ನಿಷೇಧ ಜಾರಿಗೆ ತರು​ವುದು ಸಾಧ್ಯ​ವಿಲ್ಲ ಎಂದ ಸಿಎಂ