Select Your Language

Notifications

webdunia
webdunia
webdunia
webdunia

ಮದ್ಯ ನಿಷೇ​ಧಿಸಿ ಪ್ರತಿ​ಭ​ಟನೆ ನಡೆ​ಸಿದ ಮಹಿ​ಳೆ​ಯರು; ಏಕಾ​ಏಕಿ ಮದ್ಯ ನಿಷೇಧ ಜಾರಿಗೆ ತರು​ವುದು ಸಾಧ್ಯ​ವಿಲ್ಲ ಎಂದ ಸಿಎಂ

ಮದ್ಯ ನಿಷೇ​ಧಿಸಿ ಪ್ರತಿ​ಭ​ಟನೆ ನಡೆ​ಸಿದ ಮಹಿ​ಳೆ​ಯರು;  ಏಕಾ​ಏಕಿ ಮದ್ಯ ನಿಷೇಧ ಜಾರಿಗೆ ತರು​ವುದು ಸಾಧ್ಯ​ವಿಲ್ಲ ಎಂದ ಸಿಎಂ
ಬೆಂಗಳೂರು , ಗುರುವಾರ, 31 ಜನವರಿ 2019 (15:37 IST)
ಬೆಂಗಳೂರು : ಮದ್ಯ ನಿಷೇ​ಧಿಸುವಂತೆ  ಆಗ್ರಹಿಸಿ ರಾಜ​ಧಾ​ನಿ​ಯಲ್ಲಿ ಪ್ರಬಲ ಪ್ರತಿ​ಭ​ಟನೆ ನಡೆ​ಸಿದ ಮಹಿ​ಳೆ​ಯರ ಪ್ರತಿ​ನಿ​ಧಿ​ಗಳು ಹಾಗೂ ಮುಖ್ಯ​ಮಂತ್ರಿ ಎಚ್‌.ಡಿ. ಕುಮಾ​ರ​ಸ್ವಾಮಿ ನಡು​ವಿನ ಸಂಧಾನ ಮುರಿದು ಬಿದ್ದಿದೆ.


ಗಂಡಸರು ಮದ್ಯದ ಸಹವಾಸ ಮಾಡಿ ಅವರ ಹೆಂಡ್ತಿ ಮಕ್ಕಳು ಹಾಗೂ ಮನೆ ಮಂದಿ ಉಪವಾಸವಿರುವಂತಾಗಿದೆ. ಈ ಮದ್ಯದಿಂದ ಚಿಕ್ಕಮಕ್ಕಳ ಜೀವನವೂ ಹಾಳುಗುತ್ತಿದೆ ಎಂದು ಸಾವಿರಾರು ಮಹಿಳೆಯರು ಮದ್ಯವನ್ನು ನಿಷೇಧ ಮಾಡಬೇಕೆಂದು ಬುಧವಾರ ಬೆಳಗ್ಗೆ 11 ಗಂಟೆಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ಹಿನ್ನೆ​ಲೆ​ಯಲ್ಲಿ ಮಹಿಳಾ ಹೋರಾ​ಟ​ಗಾ​ರರ ಪ್ರತಿನಿಧಿಗಳಾದ ರಂಗ​ಕರ್ಮಿ ಪ್ರಸನ್ನ ಹಾಗೂ ಸ್ವರ್ಣ ಭಟ್‌ ಅವ​ರೊಂದಿಗೆ ಮುಖ್ಯ​ಮಂತ್ರಿ ಕುಮಾ​ರ​ಸ್ವಾಮಿ ಮಾತು​ಕತೆ ನಡೆ​ಸಿ ಏಕಾ​ಏಕಿ ಮದ್ಯ ನಿಷೇಧ ಜಾರಿಗೆ ತರು​ವುದು ಸಾಧ್ಯ​ವಿಲ್ಲ. ಈ ಬಗ್ಗೆ ನಿಮ್ಮನ್ನು ಒಳ​ಗೊಂಡು ಪ್ರತ್ಯೇಕ ಸಭೆ ನಡೆ​ಸು​ತ್ತೇನೆ. ಈಗ ಪ್ರತಿಭಟನೆ ಕೈ ಬಿಡಿ ಎಂದು ಮುಖ್ಯ​ಮಂತ್ರಿ ಮಾಡಿದ ಮನ​ವಿ ಮಾಡಿದ್ದಾರೆ.


ಆದರೆ ಇದಕ್ಕೆ ಒಪ್ಪದ ಪ್ರತಿ​ಭ​ಟ​ನಾ​ಕಾ​ರರು ಪ್ರತಿಭಟನೆ ಮುಂದುವರಿಸುವುದಾಗಿ ಹೇಳಿದ್ದಾರೆ. ಹೋರಾಟಗಾರರು ಮನವಿಗೆ ಒಪ್ಪದ ಹಿನ್ನೆಲೆಯಲ್ಲಿ ಪೊಲೀಸರು ಅನಿವಾರ್ಯವಾಗಿ ಒಂದಷ್ಟು ಜನರನ್ನು ವಶಕ್ಕೆ ಪಡೆದು ಪ್ರತಿಭಟನಾಕಾರರು ಸ್ಥಳದಿಂದ ಚದುರುವಂತೆ ಮಾಡಿದರು. ಕೆಲವರನ್ನು ವಿವಿಧ ಪೊಲೀಸ್‌ ಠಾಣೆಗಳಿಗೆ ಕರೆದೊಯ್ದು ಊರುಗಳಿಗೆ ಹೋಗಲು ವ್ಯವಸ್ಥೆ ಮಾಡಲಾಯಿತು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಯ್ಯೋಧ್ಯೆಯಲ್ಲಿ ಫೆ.21ರಂದು ರಾಮ ಮಂದಿರ ನಿರ್ಮಾಣಕ್ಕೆ ಅಡಿಪಾಯ - ಸ್ವರೂಪಾನಂದ್ ಘೋಷಣೆ