Select Your Language

Notifications

webdunia
webdunia
webdunia
webdunia

ಕೈ ಶಾಸಕರ ಹೊಡೆದಾಟ ಪ್ರಕರಣ: ಗೃಹ ಸಚಿವರಿಗೆ ಸಿಎಂ ಸೂಚನೆ

ಕೈ ಶಾಸಕರ ಹೊಡೆದಾಟ ಪ್ರಕರಣ: ಗೃಹ ಸಚಿವರಿಗೆ ಸಿಎಂ ಸೂಚನೆ
ಬೆಂಗಳೂರು , ಗುರುವಾರ, 31 ಜನವರಿ 2019 (20:10 IST)
ಮೈತ್ರಿ ಸರಕಾರ ಉರುಳಿಸಲು  ಬಿಜೆಪಿ  ಮತ್ತೆ ಅಪರೇಷನ್ಕಮಲಕ್ಕೆ ಯತ್ನಿಸಿರುವ ಬೆನ್ನಲೇ ಮತ್ತೊಂದೆಡೆ ಕೈ ಶಾಸಕರ ನಡುವಿನ ಬಡಿದಾಟ ಪ್ರಕರಣ ಇತ್ಯರ್ಥಗೊಳಿಸಿ ಅವರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಬೇಕೆಂದು ಸಿಎಂ ಕುಮಾರಸ್ವಾಮಿ ಅವರು, ಗೃಹ ಸಚಿವ ಎಂ.ಬಿ. ಪಾಟೀಲ್ಗೆ ಸೂಚನೆ ನೀಡಿದ್ದಾರೆ.

ಫೆ. 6ರಿಂದ ಬಜೆಟ್ ಅಧಿವೇಶನ ಶುರುವಾಗಲಿದೆಅಷ್ಟರೊಳಗೆ ಶಾಸಕರಾದ ಕಂಪ್ಲಿ ಗಣೇಶ್ ಹಾಗೂ ಆನಂದ್ ಸಿಂಗ್ ಬಡಿದಾಟ ಪ್ರಕರಣವನ್ನ ಇತ್ಯರ್ಥ ಮಾಡುವಂತೆ ತಾಕೀತು ಮಾಡಿರುವ ಸಿಎಂ ಅವರು, ಈಗಾಗಲೇ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ವಿಪಕ್ಷ ನಾಯಕರು ಆರೋಪ ಮಾಡುತ್ತಿದ್ದಾರೆ.  

ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಪ್ರಕರಣ ಇತ್ಯರ್ಥವಾಗಬೇಕು. ಇಲ್ಲವಾದ್ರೆ ಅಧಿವೇಶನದಲ್ಲಿ ಪ್ರಕರಣ ಬೇರೆ ಸ್ವರೂಪ ಪಡೆಯುತ್ತದೆ. ಇದಕ್ಕೆ ಅವಕಾಶ ನೀಡಬೇಡಿ ಎಂದು ಹೇಳಿದ್ದಾರೆ ಎನ್ನಲಾಗಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಸುಮಲತಾ ಅಂಬರೀಶ್ ಕಣಕ್ಕಿಳಿಸಲು ಮುಂದುವರಿದ ಯತ್ನ