Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಂಗ್ರೆಸ್ ನಾಯಕ ಪಕ್ಷದಿಂದ ಉಚ್ಛಾಟನೆ

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಂಗ್ರೆಸ್ ನಾಯಕ ಪಕ್ಷದಿಂದ ಉಚ್ಛಾಟನೆ
ಕೇರಳ , ಗುರುವಾರ, 31 ಜನವರಿ 2019 (08:47 IST)
ಕೇರಳ : ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಕೇರಳದ ಕಾಂಗ್ರೆಸ್ ನಾಯಕರೊಬ್ಬರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ.


ಓಂ ಜಾರ್ಜ್ ಪಕ್ಷದಿಂದ ಉಚ್ಛಾಟನೆ ಮಾಡಲ್ಪಟ್ಟ ಕೇರಳದ ಕಾಂಗ್ರೆಸ್ ನಾಯಕ. ಜಾರ್ಜ್ ಮನೆಯ ಕೆಲಸದಾಳುಗಳಾಗಿ ದುಡಿಯುತ್ತಿದ್ದ ಕೆಲಸಗಾರೊಬ್ಬರ 17 ವರ್ಷದ ಮಗಳ ಮೇಲೆ ಎರಡು ವರ್ಷಗಳಿಂದ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ್ದಾರೆ.


ಈ ಘಟನೆಗೆ ಸಂಬಂಧಿಸಿದಂತೆ ಬಾಲಕಿ ಹಾಗೂ ಆಕೆಯ ಪೋಷಕರು ಜಾರ್ಜ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ್ವಯ ಜಾರ್ಜ್ ವಿರುದ್ದ ಎಫ್‌.ಐ.ಆರ್ ಕೂಡ ದಾಖಲಿಸಿಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಜಾರ್ಜ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಕಚೇರಿಗೆ ಬಂದು ಚಾಕು ಇರಿದ ಪತಿ. ಕಾರಣವೇನು ಗೊತ್ತಾ?