Select Your Language

Notifications

webdunia
webdunia
webdunia
webdunia

ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ: ಸಕಲ ಸಿದ್ಧತೆ

ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ: ಸಕಲ ಸಿದ್ಧತೆ
ತುಮಕೂರು , ಮಂಗಳವಾರ, 29 ಜನವರಿ 2019 (16:55 IST)
ಸಿದ್ದಗಂಗಾ ಶ್ರೀಗಳ ಪುಣ್ಯಸ್ಮರಣೆ ಅಂಗವಾಗಿ ಸಿದ್ದಗಂಗಾ ಮಠದಲ್ಲಿ ಸಿದ್ಧತೆಗಳು ಬಹುತೇಕ ಪೂರ್ಣಹಂತಕ್ಕೆ ತಲುಪಿವೆ.

ಜ.31 ರಂದು ನಡೆಯಲಿರುವ ಶ್ರೀಗಳ ಪುಣ್ಯಸ್ಮರಣೆ ಹಿನ್ನೆಲೆಯಲ್ಲಿ ಮಠದ ಆವರಣ ಸ್ವಚ್ಚತಾ ಕಾರ್ಯದಲ್ಲಿ ಸಿಬ್ಬಂದಿ ತೊಡಗಿದ್ದಾರೆ.

ಕಾರ್ಯಕ್ರಮಕ್ಕೆ ಸಜ್ಜಾಗುತ್ತಿದೆ ಗೋಸಲ ಸಿದ್ದೇಶ್ವರ ವೇದಿಕೆ. 4-5 ಲಕ್ಷ ಜನ ಭಕ್ತಾದಿಗಳು ಆಗಮಿಸುವ ನಿರೀಕ್ಷೆ ಇದೆ.
ಬರುವ ಭಕ್ತಾದಿಗಳಿಗೆ ಭೋಜನಕ್ಕೆ  ಸಿದ್ಧತೆ ನಡೆದಿದೆ. ಬೂಂದಿ, ಕಾರ ಬೂಂದಿ, ಪಾಯಸ, ಜಹಾಂಗೀರ್, ಮಾಲ್ದಿ ಪುಡಿಯನ್ನು ಬಾಣಸಿಗರು ಸಿದ್ಧಪಡಿಸುತ್ತಿದ್ದಾರೆ.
250 ಕ್ವಿಂಟಾಲ್ ಸಿಹಿಬೂಂದಿ ತಯಾರು ಮಾಡಲಾಗಿದೆ. ಮಠದ ನಾಲ್ಕು ಕಡೆ ದಾಸೋಹ ಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿವಿಐಪಿಗಳ ಆಗಮನ ಹಿನ್ನೆಲೆಯಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ಜಾಗ, ಸ್ಮಶಾನ ಉಳಿಸುವಂತೆ ಪ್ರತಿಭಟನೆ