Publish Date: Tue, 29 Jan 2019 (16:38 IST)
Updated Date: Tue, 29 Jan 2019 (16:41 IST)
ತುಮಕೂರು ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ವಿಷಯದಲ್ಲಿ ರಾಜಕೀಯ ಮುಖಂಡರ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಪ್ರಶಸ್ತಿಯ ಹೆಸರಲ್ಲಿ ರಾಜಕೀಯ ಮುಖಂಡರಿಂದ ಪರ-ವಿರುದ್ಧದ ಹೇಳಿಕೆಗಳು ಹೊರಬರುತ್ತಿದ್ದು, ಕೂಡಲೇ ಅವನ್ನು ನಿಲ್ಲಿಸಬೇಕು. ಈ ಹೇಳಿಕೆಗಳಿಂದ ಶ್ರೀಮಠದ ಭಕ್ತರು ಮತ್ತು ವಿದ್ಯಾರ್ಥಿಗಳಿಗೆ ಘಾಸಿಯಾಗುತ್ತಿದೆ. ಹೀಗಂತ ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಕಲಬುರಗಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಠದ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರು, ಪ್ರಶಸ್ತಿ ವಿಷಯದಲ್ಲಿ ಹೇಳಿಕೆ ನಿಲ್ಲಿಸಬೇಕು. ಹೀಗಂತ ಹಳೆಯ ವಿದ್ಯಾರ್ಥಿಗಳು ಆಗ್ರಹ ಮಾಡಿದರು.