Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ರನ್ನು ಜನರು ಹೀನಾಯವಾಗಿ ಸೋಲಿಸಿದ ಕಾರಣ ಕೊಡಗಿನಲ್ಲಿ ಜಲಪ್ರಳಯವಾಗಿದೆ- ನಿರಂಜನಾನಂದಪುರಿ ಸ್ವಾಮೀಜಿ

ಸಿದ್ದರಾಮಯ್ಯ ರನ್ನು ಜನರು ಹೀನಾಯವಾಗಿ ಸೋಲಿಸಿದ ಕಾರಣ ಕೊಡಗಿನಲ್ಲಿ ಜಲಪ್ರಳಯವಾಗಿದೆ- ನಿರಂಜನಾನಂದಪುರಿ ಸ್ವಾಮೀಜಿ
ಮೈಸೂರು , ಶನಿವಾರ, 9 ಫೆಬ್ರವರಿ 2019 (10:45 IST)
ಮೈಸೂರು : ಈ ರಾಜ್ಯದ ಏಳಿಗೆಗಾಗಿ ದುಡಿದ ಒಬ್ಬ ನಾಯಕನನ್ನು ಜನರು ಹೀನಾಯವಾಗಿ ಸೋಲಿಸಿದ ಕಾರಣ ಕೊಡಗಿನಲ್ಲಿ ಜಲಪ್ರಳಯವಾಗಿದೆ ಮೈಸೂರಿನಲ್ಲಿ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದ್ದಾರೆ.


ಮೈಸೂರಿನಲ್ಲಿ ಕನಕ ಭವನ ಉದ್ಘಾಟನೆಯ ಸಂದರ್ಭದಲ್ಲಿ ಮಾತನಾಡಿದ ಸ್ವಾಮೀಜಿ,’ ಹಾಲುಮತ ಸಮಾಜದ ನಾಯಕರು ಸಮಾಜದ ಅಭಿವೃದ್ಧಿ, ಏಳಿಗೆಗಾಗಿ ದುಡಿದರು. ಅವರಿಗೆ ಅನ್ಯಾಯವಾದ ಸಂದರ್ಭದಲ್ಲಿ ಪ್ರಕೃತಿ ಮುನಿಸಿಕೊಂಡು ತನ್ನ ಅರ್ಭಟ ಪ್ರದರ್ಶಿಸಿದೆ. ಆದ ಕಾರಣ ಕೊಡಗಿನಲ್ಲಿ ಜಲಪ್ರಳಯವಾಗಿದೆ. ಹೀಗಾಗಿ ಸಿದ್ದರಾಮಯ್ಯ ಸೇರಿ ನಮ್ಮ ಸಮಾಜದ ಯಾವುದೇ ನಾಯಕರ ಬಗ್ಗೆ ಹೀನಾಯವಾಗಿ ಮಾತನಾಡಬಾರದು ಎಂದು ಹೇಳಿದ್ದಾರೆ.


ಸಿದ್ದರಾಮಯ್ಯರ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಹೀಗಾಗಿ ಸಮ್ಮಿಶ್ರ ಸರ್ಕಾರ ಸಿದ್ದರಾಮಯ್ಯರ ಕೈಯಲ್ಲಿದೆ. ಅವರು ಮನಸ್ಸು ಮಾಡಿದರೆ ಏನು ಬೇಕಾದರು ಮಾಡಬಹುದು. ರಾಜಕೀಯದಲ್ಲಿ ಸಾಕಷ್ಟು ನಾಯಕರು ಹುಟ್ಟುತ್ತಾರೆ, ಮರಿನಾಯಕರು ಹುಟ್ಟುತ್ತಾರೆ. ಆದರೆ ಸಿದ್ದರಾಮಯ್ಯರಂತ ನಾಯಕರು ಹುಟ್ಟುವುದಿಲ್ಲ ಎಂದು ಹಾಡಿ ಹೊಗಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ- ಹೊಸ ಬಾಂಬ್ ಸಿಡಿಸಿದ ಶಾಮನೂರು ಶಿವಶಂಕರಪ್ಪ