Select Your Language

Notifications

webdunia
webdunia
webdunia
webdunia

ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ: ಕಾರಣ ಏನು?

ಮೈಸೂರು-ಬೆಂಗಳೂರು ಹೆದ್ದಾರಿ ತಡೆದು ಪ್ರತಿಭಟನೆ: ಕಾರಣ ಏನು?
ಮಂಡ್ಯ , ಬುಧವಾರ, 6 ಫೆಬ್ರವರಿ 2019 (21:04 IST)
ರೈತ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ಉಗ್ರ ಪ್ರತಿಭಟನೆ ನಡೆಸಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ನಾಲೆಗಳಿಗೆ ಕೆ ಆರ್ ಎಸ್  ಜಲಾಶಯದಿಂದ ನೀರು ಹರಿಸಲು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮುಖಂಡರು  ಮೈಸೂರು- ಬೆಂಗಳೂರು ಹೆದ್ದಾರಿ ತಡೆದು ಮಾನವ ಸರಪಳಿ ನಿರ್ಮಿಸಿ  ಪ್ರತಿಭಟಿಸಿದರು. ಜಲಾಶಯದಲ್ಲಿ ಈ ಬಾರಿ ನೀರು ತುಂಬಿದರೂ ರೈತರ ಬೆಳೆ ಬೆಳೆಯಲು ನೀರು ಹರಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ನೀರು ಹರಿಸುವಂತೆ ಒತ್ತಾಯಿಸಿದರು.

ಅಕ್ರಮ ಗಣಿಗಾರಿಕೆಗೆ ಒತ್ತುಕೊಡುವ ಶಾಸಕ ರವೀಂದ್ರ, ಕಲ್ಲುಗಣಿಗಾರಿಕೆ ನಡೆಯಲು ಪರೋಕ್ಷವಾಗಿ  ಬೆಂಬಲಿಸಿದ್ದಾರೆ ಎಂದು ದೂರಿದರು.

ಭತ್ತ ಖರೀದಿ ಕೇಂದ್ರಗಳು ಸಮರ್ಪಕ ಕೆಲಸ ಮಾಡುತ್ತಿಲ್ಲ. ಭತ್ತ ಸಾಗಿಸಿರುವ ರೈತರಿಗೆ ಹಣ ಸಂದಾಯವಾಗಿಲ್ಲ ಎಂದು ಪ್ರತಿಭಟನಕಾರರು ದೂರಿದರು.




Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳೆಯರನ್ನು ಚದುರಿಸಿ ಶಾಸಕ ಮಾಡಿದ್ದೇನು ಗೊತ್ತಾ?