Publish Date: Tue, 05 Feb 2019 (13:58 IST)
Updated Date: Tue, 05 Feb 2019 (14:03 IST)
ರಾಜ್ಯದ ರಾಜಕೀಯ ಬೆಳವಣಿಗೆಗಳ ನಡುವೆ ಕಾಂಗ್ರೆಸ್ ನ ಯಾವೊಬ್ಬ ಶಾಸಕರೂ ಪಕ್ಷಕ್ಕೆ ಕೈ ಕೊಡಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ್, ಯಾವೊಬ್ಬ ಶಾಸಕರೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದಿದ್ದಾರೆ. ಬಿಜೆಪಿಯವರು ಸರಕಾರ ಪತನಕ್ಕೆ ಯತ್ನ ಮುಂದುವರಿಸಿದ್ದಾರೆ. ಅವರ ವರ್ತನೆ ಜನರಿಗೆ ಬೇಸರ ತರಿಸಿದೆ ಎಂದರು.
ಬಿಜೆಪಿ ಮುಖಂಡರು ಹಗಲು ಕನಸಿನಲ್ಲಿ ತೇಲಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ ಅವರು, ಯಾವೊಬ್ಬ ನಮ್ಮ ಶಾಸಕರು ಬಿಜೆಪಿಯವರ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿದರು.