Publish Date: Mon, 04 Feb 2019 (15:47 IST)
Updated Date: Mon, 04 Feb 2019 (15:49 IST)
ಸುಮಲತಾ ಅಂಬರೀಶ್ ಅವರಿಗೆ ಹುಚ್ಚು ಇದೆಯಾ? ಹೀಗಂತ ಬಿಜೆಪಿ ಮುಖಂಡರೊಬ್ಬರು ಪ್ರಶ್ನಿಸಿದ್ದಾರೆ.
ಬಿಜೆಪಿಯಿಂದ ಸ್ಪರ್ಧಿಸಲು ಸುಮಲತಾ ಅವ್ರಿಗೆ ಹುಚ್ಚಿದ್ಯ..? ಹೀಗಂತ ಅಂಬರೀಷ್ ಪತ್ನಿ ಸುಮಲತಾರನ್ನು ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ ಆರ್. ಆಶೋಕ್‌ಗೆ ಟಕ್ಕರ್ ಡಾ.ಸಿದ್ದರಾಮಯ್ಯ ಟಕ್ಕರ್ ಕೊಟ್ಟಿದ್ದಾರೆ.
ಡಾ.ಸಿದ್ದರಾಮಯ್ಯ ಕಳೆದ ಮಂಡ್ಯ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿಯಾಗಿದ್ದರು. ಮುಂದಿನ ಲೋಕಸಭಾ ಚುನಾವಣೆಗೂ ಮಂಡ್ಯದಿಂದ ನಾನೇ ಬಿಜೆಪಿ ಅಭ್ಯರ್ಥಿ ಎಂದು ಡಾ.ಸಿದ್ದರಾಮಯ್ಯ ಹೇಳಿದರು. ಆರ್. ಆಶೋಕ್ ಅವರು ಸುಮಲತಾ ಅವರನ್ನು ಪರೋಕ್ಷವಾಗಿ ಬಿಜೆಪಿಗೆ ಆಹ್ವಾನಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ಹಾಗೂ ಸುಮಲತಾ ಅವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಅವರಿಗೆ ಬಿಜೆಪಿಯಿಂದ ಸ್ಪರ್ಧೆ ಮಾಡುವ ಅವಶ್ಯಕತೆ ಇಲ್ಲ. ಸಮ್ಮಿಶ್ರ ಸರ್ಕಾರದ ವತಿಯಿಂದ ಸ್ಪರ್ಧೆ ಮಾಡೋದು ಬಿಟ್ಟು, ವಿರೋಧ ಪಕ್ಷದಿಂದ ಕಣಕ್ಕಿಳಿಯಲು ಸುಮಲತಾ ಅವರಿಗೆ ಹುಚ್ಚಿದ್ಯ...? ಎಂದು ಪ್ರಶ್ನೆ ಮಾಡಿದ್ದಾರೆ.
ನನಗೆ ವರಿಷ್ಠರು ಹೇಳಿದ್ದಾರೆ, ನಾನು ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನೆ. ಚುನಾವಣೆ ಮುಗಿದ ಬಳಿಕ ನಿಮ್ಮ ಸೇವೆ ಮಾಡ್ತೇನೆ ಎಂದು ನಮ್ಮ ಕಾರ್ಯಕರ್ತರಿಗೆ ಮಾತು ನೀಡಿದ್ದೆ. ಕೊಟ್ಟ ಮಾತಿನಂತೆ ನಾನು ಕಾರ್ಯಕರ್ತರ ಜೊತೆಯಲ್ಲೇ ಇದ್ದೇನೆ. ವರಿಷ್ಠರು ನನಗೆ ಟಿಕೆಟ್ ನೀಡ್ತಾರೆ. ಹಾಗಾಗಿ ನನ್ನ ಕೆಲಸ ನಾನು ಮಾಡ್ತಿದ್ದೇನೆ. ಹೀಗಂತ ಮಂಡ್ಯದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಡಾ.ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.