ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ ಎಂದ ದಿನೇಶ್ ಗುಂಡೂರಾವ್

ಮಂಗಳವಾರ, 5 ಫೆಬ್ರವರಿ 2019 (13:03 IST)
ಹುಬ್ಬಳ್ಳಿ : ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕರಿಗೆ ಮತ್ತೆ ಮುಖಭಂಗ ಆಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಹೇಳಿದ್ದಾರೆ.


ಹುಬ್ಬಳ್ಳಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಮ್ಮ ಶಾಸಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಏನೇ ಮಾಡಿದರೂ ಕೂಡ ಅಪರೇಶನ್ ಕಮಲ ಯಶಸ್ಸು ಕಾಣಲ್ಲ ಎಂದು ಹೇಳಿದ್ದಾರೆ.


‘ಬಿಜೆಪಿಯವರು ಬಜೆಟ್ ಮಂಡನೆ ಆಗಲ್ಲ ಎನ್ನುತ್ತಿದ್ದಾರೆ. ಇದು 4ನೇ ಬಾರಿ ಆಪರೇಶನ್ ಕಮಲ ಮಾಡ್ತಿರೋದು. ನಮ್ಮ ಶಾಸಕರು ಎಲ್ಲಿಗಾದರೂ ಹೋಗ್ಲಿ ಬಿಜೆಪಿಗೇನು ಸಂಬಂಧ?ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ’ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಪರೇಶನ್ ಕಮಲದ ಹಿಂದೆ ಪ್ರಧಾನಿ ಮೋದಿ ಕೈವಾಡವಿಲ್ಲ - ಮಾಜಿ ಪ್ರಧಾನಿ ದೇವೇಗೌಡ