Publish Date: Wed, 06 Feb 2019 (15:19 IST)
Updated Date: Wed, 06 Feb 2019 (15:21 IST)
ರಾಜಕೀಯಕ್ಕೆ ಬರುವ ಕುರಿತು ಸದ್ಯಕ್ಕೆ ಯಾವ ಆಸಕ್ತಿಯೂ ಇಲ್ಲ. ಹೀಗಂತ ಯದುವೀರ್ ಒಡೆಯರ್ ಹೇಳಿದ್ದಾರೆ.
ಕಲಬುರಗಿಯಲ್ಲಿ ಮೈಸೂರು ಮಹಾಸಂಸ್ಥಾನದ ಮಹಾರಾಜ ಯದುವೀರ್ ಒಡೆಯರ್ ಹೇಳಿಕೆ ನೀಡಿದ್ದು, ಮೈಸೂರು ಮಹಾಸಂಸ್ಥಾನಕ್ಕೆ ಎಲ್ಲಾ ಪಕ್ಷಗಳ ಮುಖಂಡರು ಸೌಜನ್ಯಯುತ ಭೇಟಿ ನೀಡುತ್ತಿರುತ್ತಾರೆ. ಮೊದಲಿನಿಂದಲೂ ಸೌಜನ್ಯಯುತವಾಗಿ ಎಲ್ಲಾ ಪಕ್ಷದ ಮುಖಂಡರು ಭೇಟಿ ನೀಡುತ್ತಿರುತ್ತಾರೆ ಎಂದರು.
ರಾಜಕೀಯ ಕ್ಷೇತ್ರದ ಹೊರತಾಗಿಯೂ ಸಮಾಜ ಸೇವೆಯನ್ನು ಮಾಡಬಹುದು. ರಾಜಕೀಯಕ್ಕೆ ಬಂದೇ ಸಮಾಜದ ಸೇವೆ ಮಾಡಬೇಕು ಎಂದೇನಿಲ್ಲ. ಈಗಾಗಲೇ ಮೈಸೂರು ಅರಮನೆ ಮೂಲಕ ಅನೇಕ ಸಾಮಾಜಿಕ ಸೇವೆಗಳನ್ನು ಮಾಡಲಾಗುತ್ತಿದೆ ಎಂದರು.
ಕಲಬುರಗಿಯಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಹೇಳಿಕೆ ನೀಡಿದ್ದಾರೆ. ತಮ್ಮನ್ನು ಪ್ರವಾಸೋದ್ಯಮ ಇಲಾಖೆಯ ರಾಯಭಾರಿ ಮಾಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ರಾಯಭಾರಿ ಆಗಿದ್ದೇ ಆದಲ್ಲಿ ಕಲಬುರಗಿ ಭಾಗದ ಐತಿಹಾಸಿಕ ಸ್ಥಳಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ಕಲಬುರಗಿಯ ಕೋಟೆ, ದರ್ಗಾ ವಿಶಿಷ್ಟವಾಗಿದ ಪ್ರೇಕ್ಷಣೀಯ ಸ್ಥಳಗಳಾಗಿವೆ ಎಂದರು.