Select Your Language

Notifications

webdunia
webdunia
webdunia
webdunia

ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ- ಹೊಸ ಬಾಂಬ್ ಸಿಡಿಸಿದ ಶಾಮನೂರು ಶಿವಶಂಕರಪ್ಪ

ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ- ಹೊಸ ಬಾಂಬ್ ಸಿಡಿಸಿದ ಶಾಮನೂರು ಶಿವಶಂಕರಪ್ಪ
ಬೆಂಗಳೂರು , ಶನಿವಾರ, 9 ಫೆಬ್ರವರಿ 2019 (10:43 IST)
ಬೆಂಗಳೂರು : ಸಿಎಂ ಕುಮಾರಸ್ವಾಮಿ ತಮ್ಮ ಬಳಿಯಿದ್ದ ಅಪರೇಷನ್ ಕಮಲದ  ಆಡಿಯೋ ರಿಲೀಸ್ ಮಾಡಿ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದರೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿಯೂ ಆಪರೇಷನ್ ಆಡಿಯೋ ಇದೆ ಎಂದು ಶಾಸಕ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. 

ನಿನ್ನೆ ಬಜೆಟ್ ಮಂಡಿಸುವ ಮುನ್ನ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆಪರೇಷನ್ ಕಮಲ ಮಾಡಿರುವ ಬಗ್ಗೆ ಆಡಿಯೋ ರಿಲೀಸ್ ಮಾಡಿದ್ದರು. ಈ ಬಗ್ಗೆ ಈಗಾಗಲೇ ರಾಜಕೀಯ ವಲಯದಲ್ಲಿ ಬಾರೀ ಚರ್ಚೆ ನಡೆಯುತ್ತಿದೆ.

 

ಆದರೆ ಈ ನಡುವೆ ಇದೀಗ ಶಾಸಕ, ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ,’ ಸಿದ್ದರಾಮಯ್ಯ ಬಳಿ ಮತ್ತೊಂದು ಆಪರೇಷನ್ ಕಮಲದ ಆಡಿಯೋ ಇದೆ. ಅದನ್ನ ಅವರು ಬಿಡುಗಡೆ ಮಾಡಿಲ್ಲ. ಸಮಯ ಬಂದಾಗ ಬಿಡುಗಡೆ ಮಾಡುತ್ತಾರೆಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಧರ್ಮಸ್ಥಳ ಬಾಹುಬಲಿಗೆ ಮಸ್ತಕಾಭಿಷೇಕ ಸಂಭ್ರಮ (ಫೋಟೋ ಗ್ಯಾಲರಿ)