ಆ ಆಸೆಗೆ ಆತನನ್ನು ಬರೋಬ್ಬರಿ ಎರಡು ವರ್ಷಗಳ ಕಾಲ ಗೃಹ ಬಂಧನದಲ್ಲಿ ಇಡಲಾಗಿತ್ತು.
ಎರಡು ವರ್ಷಗಳಿಂದ ಗೃಹ ಬಂಧನದಲ್ಲಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ಚಿತ್ರದುರ್ಗ ನಗರದ ಮುನ್ಸಿಪಲ್ ಕಾಲೋನಿಯಲ್ಲಿ ಘಟನೆ ನಡೆದಿದೆ. ತಿಪ್ಪಾರೆಡ್ಡಿ (50) ಮುನ್ಸಿಪಲ್ ಕಾಲೋನಿ ನಿವಾಸಿ.
ಮಾನಸಿಕ ಅಸ್ವಸ್ಥ ಎಂದು ಮನೆಯಲ್ಲಿ ಕೂಡಿ ಹಾಕಿದ್ದ ಆರೋಪ ಕೇಳಿಬಂದಿದೆ. ಮಾಹಿತಿ ತಿಳಿದು ರಕ್ಷಣೆ ಮಾಡಿದ್ದಾರೆ ಮಹಿಳಾ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು.
ದಿನಕ್ಕೆವೊಂದು ಬಾರಿ ಮಾತ್ರ ಊಟ ನೀಡುತ್ತಿದ್ದರು ಕುಟುಂಬಸ್ಥರು. ಆಸ್ತಿ ವಿಚಾರಕ್ಕೆ ಗೃಹ ಬಂಧನದಲ್ಲಿರಿಸಿದ್ದರು ಅಣ್ಣ- ತಮ್ಮಂದಿರು.
ಗೃಹ ಬಂಧನದಿಂದ ಮುಕ್ತಿ ನೀಡಿದ್ದಾರೆ ಸಾಂತ್ವನ ಸಿಬ್ಬಂದಿ. ಬಡಾವಣೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.