Publish Date: Sat, 27 Apr 2019 (12:04 IST)
Updated Date: Sat, 27 Apr 2019 (12:11 IST)
ಆಸ್ತಿಗಾಗಿ ಪತಿಯನ್ನು ಸ್ವಂತ ಪತ್ನಿಯೇ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಗಂಡನನ್ನು ಕೊಲೆ ಮಾಡಲು ಅವಳು ಬಳಸಿದ ಆಯುಧವಾದರೂ ಯಾವುದು ಅಂತೀರಾ…? ಪೂರ್ಣ ಸುದ್ದಿ ಓದಿ.
ಪಿತ್ರಾರ್ಜಿತ ಆಸ್ತಿ 11 ಎಕರೆಯಲ್ಲಿ ಆತನಿಗೆ 3 ಎಕರೆ ಪಾಲು ಬಂದಿತ್ತು. ಇಷ್ಟಕ್ಕೂ ತೃಪ್ತಳಾಗದ ಆತನ ಪತ್ನಿ, ನಿತ್ಯ ಇನ್ನಷ್ಟು ಪಾಲು ಕೇಳು ಎಂದು ಗಂಡನಿಗೆ ಕಾಟ ಕೊಡಲಾರಂಭಿಸಿದ್ದಳು. ಆಸ್ತಿ ಮೇಲಿನ ಮೋಹ ಅದು ಈಗ ಕೊಲೆಯಲ್ಲಿ ಅಂತ್ಯವಾಗಿದೆ.
ಆಸ್ತಿ ಆಸೆಗಾಗಿ ಪತಿಯನ್ನು ಪತ್ನಿಯೇ ಕೊಲೆ ಮಾಡಿರುವ ಘಟನೆ ಕಲಬುರಗಿಯ ಯಡ್ರಾಮಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ನಡೆದಿದೆ. ಭೀಮರಾಯಗೌಡ ಚಿಗರಾಳ ನನ್ನು ಆತನ ಪತ್ನಿ ಪಾರ್ವತಿಯೇ ಒಲೆ ಊದುವ ಊದುಕೊಳುವೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ. ಹೀಗಂತ ಮೃತನ ತಾಯಿ ಮಾನಮ್ಮ ಆರೋಪಿಸಿ ದೂರು ನೀಡಿದ್ದಾರೆ.
ಆಸ್ತಿಗಾಗಿ ಗಲಾಟೆ ಆದಾಗ ಪತ್ನಿ ಹಾಗೂ ಆತನ ಕುಟುಂಬದವರು ಭೀಮರಾಯಗೌಡ ಮೇಲೆ ಹಲ್ಲೆ ಮಾಡಿದ್ದಾರೆ. ಗಂಭೀರ ಗಾಯಗೊಂಡಿದ್ದವನು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ದೂರಲಾಗಿದೆ.