ಎಲೆಕ್ಷನ್ ಬಳಿಕ ನಡೆಯುತ್ತಿವೆ ಭೀಕರ ಕೊಲೆಗಳು...

ಶುಕ್ರವಾರ, 26 ಏಪ್ರಿಲ್ 2019 (10:25 IST)
ಎಲೆಕ್ಷನ್ ಬಳಿಕ ಬಿಸಿಲುನಾಡಿನಲ್ಲಿ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಮೊನ್ನೆ ಒಬ್ಬ ಯುವಕನನ್ನು ಕೊಲೆ ಮಾಡಲಾಗಿದ್ದರೆ, ಈಗ ರೌಡಿ ಶೀಟರ್ ಹತ್ಯೆ ನಡೆದಿದೆ.

 ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ರೌಡಿ ಶೀಟರ್ ವೊಬ್ಬನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಕಲಬುರಗಿಯ ಬಬಲಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆನಂದ ರಾಂಪುರೆ (30) ಹೆಣವಾದ ರೌಡಿ ಶೀಟರ್. ಈತ ಕಾಂತ ಕಾಲೋನಿಯ ನಿವಾಸಿಯಾಗಿದ್ದನು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ರೌಡಿ ಶೀಟರ್ ಆನಂದ ವಿರುದ್ಧ ಹಲವು ಗಂಭೀರ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದವು. ರೌಡಿ ಹತ್ಯೆ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಪ್ರಧಾನಿ ಮೋದಿ ಇಂದು ನಾಮಪತ್ರ ಸಲ್ಲಿಕೆ: ಅದಕ್ಕೂ ಮೊದಲು ಅವರು ಮಾಡಲಿರುವ ಕೆಲಸವೇನು ಗೊತ್ತಾ?!