ಇಂಜಿನಿಯರಿಂಗ್ ಹುಡುಗಿ ಸಾವಿಗೆ ಮಿಡಿದ ವಿದ್ಯಾರ್ಥಿಗಳು

ಗುರುವಾರ, 25 ಏಪ್ರಿಲ್ 2019 (14:35 IST)
ಇಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.

ಮಧು ಪತ್ತಾರ್ ಸಾವಿಗೆ ಮಿಡಿದಿದ್ದಾರೆ ಕಾಲೇಜು ವಿಧ್ಯಾರ್ಥಿಗಳು.

ಬೆಂಗಳೂರು ಹೊರವಲಯದ ಆನೇಕಲ್ ಪಟ್ಟಣದಲ್ಲಿ ಕಾಲೇಜು ವಿಧ್ಯಾರ್ಥಿಗಳಿಂದ  ಪ್ರತಿಭಟನೆ ನಡೆದಿದೆ.

ಜಸ್ಟಿಸ್ ಫಾರ್ ಮಧು ಎಂಬ ಬೋರ್ಡ್‌ ಗಳನ್ನು ಹಿಡಿದು ಘೋಷಣೆ ಕೂಗಲಾಯಿತು.

ಮಧು ಸಾವಿಗೆ ನ್ಯಾಯ ಸಿಗಬೇಕೆಂದು ಬೀದಿಗಿಳಿದ ವಿದ್ಯಾರ್ಥಿಗಳು ಧರಣಿ ನಡೆಸಿದ್ರು.

ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಘೋಷಣೆಗಳನ್ನು ಕೂಗುವ ಮೂಲಕ ರ್ಯಾಲಿ ನಡೆಸಲಾಯಿತು. ಸಾವಿಗೆ ಮಧು ಪ್ರಕರಣದ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಧ್ವನಿ ಎತ್ತ ಬೇಕೆಂದು ವಿದ್ಯಾರ್ಥಿಗಳಿಂದ ಆಕ್ರೋಶ ವ್ಯಕ್ತವಾಯಿತು.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕರಡಿ ಮರಿಗಳಿಗೆ ಮಾಡಿದ್ದೇನು? ಶಾಕಿಂಗ್