Select Your Language

Notifications

webdunia
webdunia
webdunia
webdunia

ನರೇಗಾ ಕೆಲಸಕ್ಕೆ ಹೊರಟವರು ಹೆಣವಾಗಿದ್ದು ಹೇಗೆ?

ನರೇಗಾ ಕೆಲಸಕ್ಕೆ ಹೊರಟವರು ಹೆಣವಾಗಿದ್ದು ಹೇಗೆ?
ಬಳ್ಳಾರಿ , ಗುರುವಾರ, 25 ಏಪ್ರಿಲ್ 2019 (11:34 IST)
ನರೇಗಾ ಕೆಲಸಕ್ಕೆಂದು ಜನರು ಎಂದಿನಂತೆ ಹೊರಡುವಾಗ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 30 ಜನರು ಗಾಯಗೊಂಡ ದಾರುಣ ಘಟನೆ ಸಂಭವಿಸಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಾರುವನಹಳ್ಳಿ ಕೋಳಿ ಫಾರಂ ಬಳಿ  ರಾಷ್ಟ್ರೀಯ ಹೆದ್ದಾರಿ 53ರಲ್ಲಿ ಬೆಳಿಗ್ಗೆ ಬೆಂಗಳೂರಿನಿಂದ ಗಂಗಾವತಿಗೆ ಹೊರಟಿದ್ದ  ಸಾರಿಗೆ ಸಂಸ್ಥೆಯ ರಾಜಹಂಸ ಬಸ್ ಟ್ರಾಕ್ಟರ್‍ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಹೊಸಪೇಟೆ ತಾಲೂಕಿನ ಚಿಲಕನಹಟ್ಟಿಯ ಯರಿಸ್ವಾಮಿ(30) ಹಾಗೂ ರೇಣುಕಮ್ಮ(30) ಎಂಬುವರಾಗಿದ್ದಾರೆ. 28 ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೊಸಪೇಟೆಯ ನೂರು ಹಾಸಿಗೆ ಆಸ್ಪತ್ರೆಗೆ ಸೇರಿಸಲಾಗಿದೆ.

ಹಾರುವನಹಳ್ಳಿ ಹಾಗೂ ಚಿಲಕನಹಟ್ಟಿಯಿಂದ ನರೇಗಾ ಕೆಲಸಕ್ಕೆಂದು ಜನರು ಎಂದಿನಂತೆ ಟ್ರಾಕ್ಟ್ರರ್‍ನಲ್ಲಿ ಹೊರಟಾಗ ಈ ದುರ್ಘಟನೆ ಸಂಭವಿಸಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಕೋರ್ ಕಮಿಟಿ ಸಭೆ ಶುರು: ಬೈ ಎಲೆಕ್ಷನ್ ಅಭ್ಯರ್ಥಿ ಫೈನಲ್