ಬಸ್ ಗಳಲ್ಲಿ ಇವರೇನು ಮಾಡ್ತಿದ್ರು ಗೊತ್ತಾ?

ಮಂಗಳವಾರ, 16 ಏಪ್ರಿಲ್ 2019 (18:26 IST)
ಬಸ್ ಗಳಲ್ಲಿ ಜನರನ್ನು ಗೊತ್ತಿಲ್ಲದಂತೆ ಯಾಮಾರಿಸುತ್ತಿದ್ದ ಜನರನ್ನು ಬಂಧನ ಮಾಡಲಾಗಿದೆ.

ಪಿಕ್ ಪ್ಯಾಕೇಟ್ ಮಾಡುತ್ತಿದ್ದ ಖದೀಮರ ಬಂಧನ ಮಾಡಲಾಗಿದೆ. ಬೆಂಗಳೂರಿನ ಮಾರತ್ ಹಳ್ಳಿ ಪೊಲೀಸರು  ಯಶಸ್ವಿ ಕಾರ್ಯಚರಣೆ ನಡೆಸಿದ್ದು, ಸಯ್ಯದ್ ಆಕ್ಮಲ್, ಪೈಜಾನ್, ಆಸ್ಲಾಂ ಪಾಷ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ 6 ಲಕ್ಷ ಬೆಲೆ ಬಾಳುವ 22 ಮೊಬೈಲ ಫೋನ್ ಹಾಗೂ 133 ಗ್ರಾಂ ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ ಪೋಲಿಸರು.

ಬಿಎಂಟಿಸಿ ಬಸ್ ಗಳಲ್ಲಿ ಪ್ರಯಾಣಿಕರ ಬಳಿ ಮೊಬೈಲ್, ಪರ್ಸ್, ಚಿನ್ನಾಭರಣ ಖದಿಯುತ್ತಿದ್ದ ಕಳ್ಳರು ಇವರಾಗಿದ್ದಾರೆ.
ಮಾರತ್ ಹಳ್ಳಿ ಪೋಲಿಸರಿಂದ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಬಂಧನ ಮಾಡಲಾಗಿದೆ.ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಬಿಜೆಪಿ ನಾಯಕರ ವಿರುದ್ಧ ಗುಡುಗಿದ ಕನಕಪುರ ಬಂಡೆ